ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 3ಜಿ ಹರಾಜಿನಿಂದ 35,000 ಕೋಟಿ ರೂ.ಆದಾಯ: ಎ.ರಾಜಾ (3G spectrum | Auction | Telecom | Gujarat)
Bookmark and Share Feedback Print
 
3ಜಿ ತರಂಗಾಂತರಗಳ ಹರಾಜಿನಿಂದ ಸರಕಾರಕ್ಕೆ ಈ ಮೊದಲು ಅಂದಾಜಿಸಿದಂತೆ, 30,000-35,000 ಕೋಟಿ ರೂಪಾಯಿ ಆದಾಯವಾಗುವ ನಿರೀಕ್ಷೆಯಿದೆ ಎಂದು ಟೆಲಿಕಾಂ ಸಚಿವ ಎ.ರಾಜಾ ಹೇಳಿದ್ದಾರೆ.

ಇದಕ್ಕಿಂತ ಮೊದಲು, 3ಜಿ ತರಂಗಾಂತರಗಳ ಹರಾಜಿನಿಂದ 30,000-35,000 ಕೋಟಿ ರೂಪಾಯಿ ಸರಕಾರಕ್ಕೆ ಆದಾಯವಾಗಲಿದೆ ಎಂದು ಹೇಳಿದ್ದೆ. ಆದರೆ ಇದೀಗ ಆದಾಯದಲ್ಲಿ ಮತ್ತಷ್ಟ ಹೆಚ್ಚಳವಾಗಲಿದೆ. ಆದರೆ ಎಷ್ಟು ಹೆಚ್ಚಳವಾಗಲಿದೆ ಎನ್ನುವುದನ್ನು ಬಹಿರಂಗಪಡಿಸಲು ನಿರಾಕರಿಸಿದರು.

ಏಪ್ರಿಲ್‌ 17ರವರೆಗೆ ನಡೆದ 3ಜಿ ತರಂಗಾಂತರಗಳ ಹರಾಜಿನ ನಾಲ್ಕನೇ ಸುತ್ತಿನಲ್ಲಿ ಕನಿಷ್ಠ 22,841 ಕೋಟಿ ರೂಪಾಯಿ ಆದಾಯ ಖಚಿತವಾಗಿತ್ತು.ಹರಾಜಿನ ಏಳನೇ ದಿನದಲ್ಲಿ ಶೇ.63ರಷ್ಟು ಹೆಚ್ಚಳವಾಗಿ 5,710.36 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿತ್ತು.

3ಜಿ ಹರಾಜಿನಲ್ಲಿ ಅಗ್ರಸ್ಥಾನದಲ್ಲಿದ್ದ ದೆಹಲಿಯನ್ನು ಹಿಂದಕ್ಕೆ ತಳ್ಳಿ, ಗುಜರಾತ್ 626.37 ಕೋಟಿ ರೂಪಾಯಿಗಳಿಗೆ ತಲುಪಿ ಅಗ್ರಸ್ಥಾನವನ್ನು ಅಲಂಕರಿಸಿದೆ. ಮುಂಬೈ 598.59 ಕೋಟಿ ರೂಪಾಯಿಗಳಿಗೆ ತಲುಪಿದೆ.

3ಜಿ ತರಂಗಾಂತರಗಳ ಹರಾಜಿನಲ್ಲಿ ತಮಿಳುನಾಡು, 549.24 ಕೋಟಿ ರೂಪಾಯಿಗಳಿಗೆ ತಲುಪುವ ಮೂಲಕ ಮೂರನೇ ಸ್ಥಾನದಲ್ಲಿದೆ.

ಮೂಲಗಳ ಪ್ರಕಾರ, 3ಜಿ ಬಿಡ್ ಹರಾಜಿನಲ್ಲಿ ಮಹಾರಾಷ್ಟ್ರ 533.37 ಕೋಟಿ ರೂಪಾಯಿ,ಕರ್ನಾಟಕ 507.97 ಕೋಟಿ ರೂಪಾಯಿ ಮತ್ತು ಆಂಧ್ರಪ್ರದೇಶ 493.50 ಕೋಟಿ ರೂಪಾಯಿಗಳಿಗೆ ತಲುಪಿದೆ.
ಸಂಬಂಧಿತ ಮಾಹಿತಿ ಹುಡುಕಿ