ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಅಧಿವೇಶನದ ನಂತರ ಮತ್ತೆ ಪೆಟ್ರೋಲ್ ದರ ಏರಿಕೆ? (Parliament | Murli Deora)
Bookmark and Share Feedback Print
 
ಸಂಸತ್ತಿನಲ್ಲಿ ಬಜೆಟ್ ಅಧಿವೇಶನ ಮುಕ್ತಾಯಗೊಂಡ ನಂತರ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಏರಿಕೆಯಾಗಲಿವೆ ಎನ್ನುವ ವರದಿಗಳು ಮತ್ತೆ ಕೋಲಾಹಲ ಸೃಷ್ಟಿಸುವ ಸಾಧ್ಯತೆಗಳು ಕಂಡುಬರುತ್ತಿವೆ. ಸರಕಾರ ಭಾಗಾಂಶ ಅಥವಾ ಅಲ್ಪ ದರ ಏರಿಕೆ ಮಾಡುವುದರ ಮೇಲೆ ದರ ಏರಿಕೆ ಅವಲಂಬಿತವಾಗಲಿದೆ.

ಒಂದು ವೇಳೆ ಭಾಗಾಂಶ ದರ ಏರಿಕೆ ಮಾಡಲು ಸರಕಾರ ನಿರ್ಧರಿಸಿದಲ್ಲಿ, ಪೆಟ್ರೋಲ್ ಪ್ರತಿ ಲೀಟರ್‌ಗೆ 6.68 ರೂಪಾಯಿ, ಡೀಸೆಲ್‌ಗೆ 5.81 ರೂಪಾಯಿಗಳಷ್ಟು ದರ ಏರಿಕೆಯಾಗಲಿದೆ.ಆಯಾ ರಾಜ್ಯಗಳ ಸ್ಥಳೀಯ ತೆರಿಗೆಗಳಿಂದಾಗಿ, ಗ್ರಾಹಕರು ಮತ್ತಷ್ಟು ಹೆಚ್ಚಿನ ದರವನ್ನು ಭರಿಸಬೇಕಾಗುತ್ತದೆ. ಸರಕಾರ ಅಲ್ಪ ದರ ಏರಿಕೆ ಮಾಡಿದಲ್ಲಿ ಪೆಟ್ರೋಲ್‌ಗೆ 3-4 ರೂಪಾಯಿ ಮತ್ತು ಡೀಸೆಲ್‌ಗೆ 2-3 ರೂಪಾಯಿ ಹೆಚ್ಚಳವಾಗುವ ಸಾಧ್ಯತೆಗಳಿವೆ.

ಪೆಟ್ರೋಲಿಯಂ ಖಾತೆ ಸಚಿವ ಮುರಳಿ ದೇವ್ರಾ, ಇಂಧನ ದರಗಳ ಏರಿಕೆ ಕುರಿತಂತೆ ಚರ್ಚಿಸಲು ಸಚಿವರ ಸಮಿತಿಯನ್ನು ರಚಿಸುವಂತೆ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರಿಗೆ ಒತ್ತಾಯಿಸಿದ್ದಾರೆ.

ಸರಕಾರಿ ಸ್ವಾಮ್ಯದ ತೈಲ ಕಂಪೆನಿಗಳು 2009-10ರ ಅವಧಿಯಲ್ಲಿ ತೈಲ ಮಾರಾಟದಿಂದಾಗಿ 47,960 ಕೋಟಿ ರೂಪಾಯಿಗಳ ನಷ್ಟ ಅನುಭವಿಸಿದೆ.ಪ್ರಸಕ್ತ ಸ್ಥಿತಿ ಮುಂದುವರಿದಲ್ಲಿ 2010-11ರ ಅವಧಿಯ ಮುಕ್ತಾಯಕ್ಕೆ 87,440 ಕೋಟಿ ನಷ್ಟ ಎದುರಾಗಲಿದೆ ಎಂದು ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ