ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಅಗತ್ಯವಾದಲ್ಲಿ ಮತ್ತಷ್ಟು ಸಿಆರ್‌ಆರ್ ದರಗಳಲ್ಲಿ ಹೆಚ್ಚಳ (RBI | CRR | Liquidity | Banking system | Subir Gokarn)
Bookmark and Share Feedback Print
 
ಭಾರತೀಯ ರಿಸರ್ವ್ ಬ್ಯಾಂಕ್ ಏಪ್ರಿಲ್ 20 ರಂದು ನಡೆಸಿದ ಆರ್ಥಿಕ ಪರಿಷ್ಕರಣ ಸಭೆಯಲ್ಲಿ ರೆಪೋ ದರಗಳಲ್ಲಿ ಹೆಚ್ಚಳಗೊಳಿಸಿದ್ದು, ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ನಗದು ಹರಿವಿನ ಪ್ರಮಾಣ ಹೆಚ್ಚಳವಾದಲ್ಲಿ ಮತ್ತಷ್ಟು ರೆಪೋ ದರಗಳಲ್ಲಿ ಹೆಚ್ಚಳ ಮಾಡಲಾಗುವುದು ಎಂದು ಆರ್‌ಬಿಐ ಉಪ ಗವರ್ನರ್ ಹೇಳಿದ್ದಾರೆ.

ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ನಗದು ಹರಿವನ್ನು ನಿಯಂತ್ರಿಸಲು ಕ್ಯಾಶ್ ರಿಸರ್ವ್ ರೇಶಿಯೋ ಪ್ರಬಲ ಅಸ್ತ್ರವಾಗಿದ್ದು, ಒಂದು ವೇಳೆ ನಗದು ಹರಿವಿನ ಪ್ರಮಾಣವನ್ನು ನಿಯಂತ್ರಿಸಲು ಅಸ್ತ್ರವನ್ನು ಬಳಸಲಾಗುವುದು ಎಂದು ಉಪ ಗವರ್ನರ್ ಸುಬೀರ್ ಗೊಕರ್ಣ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮಂಗಳವಾರದಂದು ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರಗಳಲ್ಲಿ 25 ಬೇಸಿಸ್ ಪಾಯಿಂಟ್‌ಗಳಲ್ಲಿ ಹೆಚ್ಚಳಗೊಳಿಸಿತ್ತು.ಕ್ಯಾಶ್ ರಿಸರ್ವ್ ರೇಶಿಯೋದಲ್ಲಿ ಕೂಡಾ 25 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಳಗೊಳಿಸಿ, 125 ಬಿಲಿಯನ್ ರೂಪಾಯಿಗಳ ನಗದು ಹರಿವನ್ನು ಹಿಂದಕ್ಕೆ ಪಡೆದಿತ್ತು.

ಒಂದು ವೇಳೆ ನಗದು ಹರಿವಿನ ಪ್ರಮಾಣದ ಸ್ಥಿತಿ ಮತ್ತಷ್ಟು ಹೆಚ್ಚಳವಾದಲ್ಲಿ, ಸಿಐರ್‌ಆರ್ ದರಗಳನ್ನು ಹೆಚ್ಚಳಗೊಳಿಸುವುದು ಅಗತ್ಯವಾಗುತ್ತದೆ ಎಂದು ಉಪಗವರ್ನರ್ ಗೊಕರ್ಣ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ