ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಜ್ವಾಲಾಮುಖಿ: ಏರ್‌ಲೈನ್‌ಗಳಿಗೆ 1.7 ಬಿನ್‌ ಡಾಲರ್ ನಷ್ಟ (IATA | Airlines | Iceland | Volcano | Europe)
Bookmark and Share Feedback Print
 
ಐಸ್‌ಲ್ಯಾಂಡ್‌ನಲ್ಲಿ ಜ್ವಾಲಾಮುಖಿಯಿಂದಾಗಿ ದಟ್ಟ ಹೊಗೆ ಹೊರಹೊಮ್ಮುತ್ತಿದ್ದು, ಯುರೋಪ್‌ದಾದ್ಯಂತ ಮೋಡಗಳಲ್ಲಿ ಆವರಿಸಿದ್ದರಿಂದ, ವಿಮಾನ ಸಂಚಾರ ಸ್ಥಗಿತಗೊಂಡು 1.7 ಬಿಲಿಯನ್ ಡಾಲರ್‌ಗಳಿಗಿಂತಲೂ ಹೆಚ್ಚಿನ ನಷ್ಟ ಉಂಟಾಗಿದೆ ಎಂದು ಇಂಟರ್‌ನ್ಯಾಷನಲ್ ಏರ್‌ ಟ್ರಾನ್ಸ್‌ಪೋರ್ಟ್ ಅಸೋಸಿಯೇಶನ್ (ಐಎಟಿಎ) ಅಧಿಕಾರಿಗಳು ತಿಳಿಸಿದ್ದಾರೆ.

ಸುಮಾರು ಏಳು ದಿನಗಳಿಂದ ನಿರಂತರವಾಗಿ ಜ್ವಾಲಾಮುಖಿ ಉಲ್ಬಣಿಸುತ್ತಿದ್ದು, ಯುರೋಪ್ ರಾಷ್ಟ್ರಗಳಲ್ಲಿ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ.ಇದರಿಂದಾಗಿ ವಿಶ್ವದಾದ್ಯಂತ ಹಲವಾರು ವಿಮಾನಯಾನ ಸಂಸ್ಥೆಗಳು ಭಾರಿ ನಷ್ಟವನ್ನು ಎದುರಿಸಬೇಕಾಗಿ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯುರೋಪ್‌ನಲ್ಲಿ ಭಾರಿ ಬಿಕ್ಕಟ್ಟಿನ ಸ್ಥಿತಿ ಎದುರಾಗಿದೆ.ಹಲವಾರು ಪ್ರಯತ್ನಗಳ ನಂತರವೂ ವಿಮಾನ ಹಾರಾಟ ಆರಂಬಿಸಲು ಸಾಧ್ಯವಾಗುತ್ತಿಲ್ಲ ಎಂದು ಐಎಟಿಎ ಮುಖ್ಯಸ್ಥ ಗಿಯೊವನ್ನಿ ಬಿಸಿಗ್ನಾನಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ