ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 3ಜಿ ಹರಾಜಿನಿಂದ 45 ಸಾವಿರ ಕೋಟಿ ಆದಾಯ: ರಾಜಾ (A Raja|Broadband Wireless Access|3 G spectrum)
Bookmark and Share Feedback Print
 
ಬಹುನಿರೀಕ್ಷಿತ 3ಜಿ ತರಂಗಾಂತರಗಳನ್ನು ಪಡೆಯಲು ಭಾರಿ ಸ್ಪರ್ಧೆಯಿಂದಾಗಿ, ಕೇಂದ್ರ ಸರಕಾರಕ್ಕೆ 45,000 ಕೋಟಿ ರೂಪಾಯಿ ಆದಾಯವಾಗುವ ನಿರೀಕ್ಷೆಯಿದೆ ಎಂದು ಟೆಲಿಕಾಂ ಖಾತೆ ಸಚಿವ. ಎ.ರಾಜಾ ಹೇಳಿದ್ದಾರೆ.

3ಜಿ ತರಂಗಾಂತರಗಳ ಹರಾಜಿನಿಂದ ಸರಕಾರಕ್ಕೆ 35 ಸಾವಿರ ಕೋಟಿ ರೂಪಾಯಿ ಆದಾಯವಾಗಲಿದೆ ಎಂದು ಅಂದಾಜಿಸಲಾಗಿತ್ತು.

3ಜಿ ತರಂಗಾಂತರ ಹಾಗೂ ಬಿಡಬ್ಲೂಎ ತರಂಗಾಂತರಗಳ ಹರಾಜಿನಿಂದ ಸರಕಾರಕ್ಕೆ, ಅಂದಾಜು 44,000-45,000 ರೂಪಾಯಿಗಳ ಆದಾಯವಾಗುವ ನಿರೀಕ್ಷೆಗಳಿವೆ. ಈ ಹಿಂದೆ 35,000 ಕೋಟಿ ರೂಪಾಯಿ ಆದಾಯವಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. 3ಜಿ ಹರಾಜಿನ ಹತ್ತನೆಯ ದಿನದಂದು ಹರಾಜು ಮೊತ್ತ 6,634 ಕೋಟಿ ರೂಪಾಯಿಗಳಿಗೆ ತಲುಪಿದ್ದು ಮೀಸಲು ದರಕ್ಕಿಂತ ಶೇ.90ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದ್ದಾರೆ.

ದೆಹಲಿ ನಗರಕ್ಕೆ 320 ಕೋಟಿ ರೂಪಾಯಿ ಮೀಸಲು ದರ ನಿಗದಿಪಡಿಸಲಾಗಿತ್ತು.ಆದರೆ ಹರಾಜು ಮೊತ್ತ 771 ಕೋಟಿ ರೂಪಾಯಿಗಳಿಗೆ ತಲುಪಿ ಅಗ್ರಸ್ಥಾನದಲ್ಲಿದೆ. ಮುಂಬೈ 708.9 ಕೋಟಿ ರೂಪಾಯಿಗಳ ಹರಾಜು ಮೊತ್ತವನ್ನು ಪಡೆದು ಎರಡನೇ ಸ್ಥಾನದಲ್ಲಿದೆ.ನಂತರದ ಸ್ಥಾನವನ್ನು 663.15 ಕೋಟಿ ರೂಪಾಯಿಗಳಿಗೆ ತಲುಪುವ ಮೂಲಕ ಮಹಾರಾಷ್ಟ್ರ ಪಡೆದುಕೊಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ