ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಜಪಾನ್ ರಫ್ತು ವಹಿವಾಟಿನಲ್ಲಿ ಶೇ.40ರಷ್ಟು ಹೆಚ್ಚಳ (Japan | exports | Global economy | Imports)
Bookmark and Share Feedback Print
 
ಜಾಗತಿಕ ಆರ್ಥಿಕತೆ ಸುಸ್ಥಿತಿಗೆ ಮರಳುತ್ತಿರುವ ಹಿನ್ನೆಲೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ, ಪ್ರಸಕ್ತ ವರ್ಷದ ರಫ್ತು ವಹಿವಾಟಿನಲ್ಲಿ ಶೇ. 43.5ರಷ್ಟು ಹೆಚ್ಚಳವಾಗಿದೆ ಎಂದು ವಹಿವಾಟಿನ ಮೂಲಗಳು ತಿಳಿಸಿವೆ.

ಕಳೆದ ಸತತ ನಾಲ್ಕು ತಿಂಗಳುಗಳಿಂದ ರಫ್ಚು ವಹಿವಾಟಿನಲ್ಲಿ ನಿರಂತರ ಚೇತರಿಕೆ ಕಂಡುಬರುತ್ತಿದೆ ಎಂದು ಸರಕಾರಿ ಅಧಿಕಾರಿಗಳು ಹೊರಡಿಸಿದ ಪ್ರಕಟಣೆಯಲ್ಲಿ ಬಹಿರಂಗಪಡಿಸಿದೆ.

ನೌಕಾ ವಹಿವಾಟು ವಿಶ್ವದಲ್ಲಿ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಏಷ್ಯಾದಲ್ಲಿ ಶೇ.53ರಷ್ಟು ಹೆಚ್ಚಳವಾಗಿದ್ದು, ಅಮೆರಿಕದಲ್ಲಿ ಶೇ.30ರಷ್ಟು ಏರಿಕೆಯಾಗಿದೆ.

ದೇಶದ ಅಮುದು ವಹಿವಾಟಿನಲ್ಲಿ ಕೂಡಾ ಶೇ.20.7ರಷ್ಟು ಹೆಚ್ಚಳವಾಗಿ, ಅಮುದು ವಹಿವಾಟು 948.9 ಬಿಲಿಯನ್ ಯೆನ್‌ಗಳಿಗೆ ತಲುಪಿದೆ ಎಂದು ವಿತ್ತಸಚಿವಾಲಯದ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ