ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಶೇ.17.65ಕ್ಕೆ ಏರಿಕೆಯಾದ ಅಹಾರ ಹಣದುಬ್ಬರ ದರ (Food inflation | Fruits | Vegetables | Central bank)
Bookmark and Share Feedback Print
 
ತರಕಾರಿ ಮತ್ತು ಹಣ್ಣುಗಳ ದರ ಏರಿಕೆಯಿಂದಾಗಿ ಅಹಾರ ಹಣದುಬ್ಬರ ದರ ಕಳೆದ ವಾರದಲ್ಲಿ ಶೇ.17.22ರಷ್ಟಿದ್ದು, ಏಪ್ರಿಲ್ 10ಕ್ಕೆ ವಾರಂತ್ಯಗೊಂಡಂತೆ ಶೇ. 17.65ಕ್ಕೆ ತಲುಪಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ಕಳೆದ ವರ್ಷದ ಏಪ್ರಿಲ್ ತಿಂಗಳ ಅವಧಿಯಲ್ಲಿ ಅಹಾರ ಹಣದುಬ್ಬರ ದರ ಶೇ.8.16ಕ್ಕೆ ತಲುಪಿತ್ತು ಎಂದು ವಿತ್ತಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಹಣ್ಣು ಮತ್ತು ತರಕಾರಿಗಳ ದರಗಳಲ್ಲಿ ಶೇ.3ರಷ್ಟು ಏರಿಕೆಯಾಗಿದ್ದು, ದ್ವಿದಳ ಧಾನ್ಯಗಳ ದರಗಳಲ್ಲಿ ಶೇ.1ರಷ್ಟು ಏರಿಕೆಯಾಗಿದೆ.

ಅಹಾರ ದರಗಳ ಏರಿಕೆಯಿಂದಾಗಿ ಒಟ್ಟಾರೆ ಹಣದುಬ್ಬರ ದರ ಶೇ.9.9ಕ್ಕೆ ಏರಿಕೆಯಾಗಿದೆ. ಮಾರ್ಚ್ ಅಂತ್ಯಕ್ಕೆ ಹಣದುಬ್ಬರ ದರ ಶೇ.8.5ಕ್ಕೆ ತಲುಪಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಅಧ್ಯಯನ ವರದಿಯಲ್ಲಿ ಹೇಳಿಕೆ ನೀಡಿತ್ತು.

ವಾರ್ಷಿಕ ಆಧಾರದ ಹಿನ್ನೆಲೆಯಲ್ಲಿ ದ್ವಿದಳ ಧಾನ್ಯಗಳ ದರಗಳಲ್ಲಿ ಶೇ.28.77ರಷ್ಟು ಏರಿಕೆಯಾಗಿದ್ದು. ಹಾಲಿನ ದರ ಶೇ.22.21.ಹಣ್ಣುಗಳ ದರಗಳಲ್ಲಿ ಶೇ.18.81 ಮತ್ತು ಗೋಧಿಯ ದರದಲ್ಲಿ ಶೇ.11.18ರಷ್ಟು ಏರಿಕೆಯಾಗಿದೆ.

ವಾರದ ಆಧಾರದಲ್ಲಿ ಅಹಾರ ವಸ್ತುಗಳ ಸೂಚ್ಯಂಕ ಶೇ.0.7ರಷ್ಟು ಏರಿಕೆಯಾಗಿದ್ದು, ಅಹಾರೇತರ ವಸ್ತುಗಳ ಸೂಚ್ಯಂಕದಲ್ಲಿ ಶೇ.0.5ರಷ್ಟು ಹೆಚ್ಚಳವಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ