ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಎಸಿಸಿ ಕಂಪೆನಿಗೆ 392.87 ಕೋಟಿ ರೂ.ನಿವ್ವಳ ಲಾಭ (ACC | Cement manufacturer | Net profit | Quarter)
Bookmark and Share Feedback Print
 
ಸಿಮೆಂಟ್ ಉತ್ಪಾದಕ ಸಂಸ್ಥೆಯಾದ ಎಸಿಸಿ ಲಿಮಿಟೆಡ್, ಮಾರ್ಚ್ 31ಕ್ಕೆ ತ್ರೈಮಾಸಿಕ ಅಂತ್ಯಗೊಂಡಂತೆ ಕ್ರೂಢೀಕೃತ 392.87 ಕೋಟಿ ರೂಪಾಯಿಗಳ ನಿವ್ವಳ ಲಾಭವಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಕಳೆದ ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ಕಂಪೆನಿ, ಕ್ರೂಢೀಕೃತ ನಿವ್ವಳ ಲಾಭ 399.34 ಕೋಟಿ ರೂಪಾಯಿಗಳ ಲಾಭವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಂಪೆನಿಯ ಒಟ್ಟು ವಹಿವಾಟು ಮಾರ್ಚ್ ತಿಂಗಳ ಅವಧಿಯಲ್ಲಿ 2,240.37 ಕೋಟಿ ರೂಪಾಯಿಗಳಿಗೆ ತಲುಪಿದೆ.ಕಳೆದ ವರ್ಷದ ಅವಧಿಯಲ್ಲಿ 2,163.99 ಕೋಟಿ ರೂಪಾಯಿಗಳಾಗಿತ್ತು.

ಕಂಪೆನಿ ಮಾರ್ಚ್ ತಿಂಗಳ ಅವಧಿಯ ನಿವ್ವಳ ಲಾಭ 405.12 ಕೋಟಿ ರೂಪಾಯಿಗಳಿಗೆ ತಲುಪಿದೆ. ಕಳೆದ ವರ್ಷದ ಮಾರ್ಚ್ ತಿಂಗಳ ಅವಧಿಯಲ್ಲಿ 404.76 ಕೋಟಿ ರೂಪಾಯಿಗಳಾಗಿತ್ತು ಎಂದು ಕಂಪೆನಿ ಮುಂಬೈ ಶೇರುಪೇಟೆಗೆ ಸಲ್ಲಿಸಿದ ಮಾಹಿತಿಯಲ್ಲಿ ಬಹಿರಂಗಪಡಿಸಿದೆ.

ಏತನ್ಮಧ್ಯೆ, ಶೇರುಪೇಟೆಯಲ್ಲಿ ಎಸಿಸಿ ಶೇರು ದರ ತಲಾ ಶೇರಿಗೆ 920.30 ರೂಪಾಯಿಗಳಾಗಿದ್ದು, ಹಿಂದಿನ ವಹಿವಾಟಿನ ಮುಕ್ತಾಯಕ್ಕೆ ಹೋಲಿಸಿದಲ್ಲಿ ಶೇ.1.17ರಷ್ಟು ಇಳಿಕೆ ಕಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ