ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ದರ ಏರಿಕೆ: ಏ.27 ರಂದು ದೇಶಾದ್ಯಂತ ಬಂದ್‌ಗೆ ಕರೆ (Cut motion | Fuel price| New Delhi)
Bookmark and Share Feedback Print
 
ಪೆಟ್ರೋಲ್, ಡೀಸೆಲ್ ಮತ್ತು ರಸಗೊಬ್ಬರ ದರ ಏರಿಕೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ ಎಡಪಕ್ಷಗಳು ಸೇರಿದಂತೆ 13 ಪಕ್ಷಗಳ ನಾಯಕರು ಏಪ್ರಿಲ್ 27 ರಂದು ದೇಶಾದ್ಯಂತ್ ಬಂದ್‌ಗೆ ಕರೆ ನೀಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಲೋಕಸಭೆಯಲ್ಲಿ ಇಂಧನ ಹಾಗೂ ರಸಗೊಬ್ಬರ ದರಗಳ ಏರಿಕೆಯನ್ನು ಹಿಂಪಡೆಯುವಂತೆ, ಹಣಕಾಸು ಮಸೂದೆಗೆ ತಿದ್ದುಪಡಿ ತರುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸಲಾಗುವುದು ಎಂದು ಸಿಪಿಐ ನಾಯಕ ಸೀತಾರಾಂ ಯಚೂರಿ,13ಪಕ್ಷಗಳ ನಾಯಕರು ಉಪಸ್ಥಿತರಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಎಐಎಡಿಎಂಕೆ, ಟಿಡಿಪಿ, ಆರ್‌ಜೆಡಿ, ಸಮಾಜವಾದಿ ಪಕ್ಷ, ಐಎನ್‌ಎಲ್‌ಡಿ ಮತ್ತು ಆರ್‌ಎಲ್‌ಡಿ ಪಕ್ಷಗಳು, ಅಗತ್ಯ ವಸ್ತುಗಳ ದರ ಏರಿಕೆಗೆ ಕಾರಣವಾದ ಕೇಂದ್ರ ಸರಕಾರದ ವೈಫಲ್ಯವನ್ನು ವಿರೋಧಿಸಿ ದೇಶಾದ್ಯಂತ ಬಂದ್‌ಗೆ ಕರೆ ನೀಡಿವೆ ಎಂದು ಯಚೂರಿ ಹೇಳಿದ್ದಾರೆ.

ಕೇಂದ್ರ ಸರಕಾರ ಪೆಟ್ರೋಲ್, ಡೀಸೆಲ್ ಮತ್ತು ರಸಗೊಬ್ಬರ ದರಗಳಲ್ಲಿ ಅಬಕಾರಿ, ಕಸ್ಟಮ್ಸ್ ತೆರಿಗೆಯನ್ನು ಹೆಚ್ಚಳಗೊಳಿಸಿದ್ದು, ಹಣಕಾಸು ಮಸೂದೆಗೆ ತಿದ್ದುಪಡಿ ತರುವಂತೆ ಸರಕಾರವನ್ನು ಒತ್ತಾಯಿಸಲಾಗುವುದು ಎಂದು ಯಚೂರಿ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.

ಒಂದು ವೇಳೆ ಹಣಕಾಸು ಮಸೂದೆಗೆ ತಿದ್ದುಪಡಿ ತಂದಲ್ಲಿ, ಅಧಿಸೂಚನೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಹಾಗೂ ರಸಗೊಬ್ಬರ ದರಗಳನ್ನು ಸರಕಾರ ಹಿಂಪಡೆಯಬೇಕಾಗುತ್ತದೆ ಎಂದು ಸಿಪಿಐ ನಾಯಕ ಸೀತಾರಾಂ ಯಚೂರಿ ತಿಳಿಸಿದ್ದಾರೆ
ಸಂಬಂಧಿತ ಮಾಹಿತಿ ಹುಡುಕಿ