ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಜಾಗತಿಕ ಆರ್ಥಿಕತೆ ಇವತ್ತಿಗೂ ಅಪಾಯದಲ್ಲಿದೆ: ಐಎಂಎಫ್ (World | Recovery | IMF | Fragile | Unemployment)
Bookmark and Share Feedback Print
 
ಜಾಗತಿಕ ಆರ್ಥಿಕತೆ ಪ್ರಸ್ತುತ ಅಪಾಯದಲ್ಲಿದ್ದು, ಶೀಘ್ರದಲ್ಲಿ ನಿರೀಕ್ಷೆಯಂತೆ ಚೇತರಿಸಿಕೊಳ್ಳುವ ವಿಶ್ವಾಸವಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ(ಐಎಂಎಫ್) ಹೇಳಿಕೆ ನೀಡಿದೆ.

ಜಾಗತಿಕ ಆರ್ಥಿಕತೆ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಬಹುತೇಕ ದೇಶಗಳು ಆರ್ಥಿಕ ಸಂಕಷ್ಟ ಅಂತ್ಯಗೊಂಡಿದೆ ಎಂದು ಭಾವಿಸಿವೆ. ಆದರೆ ಮುಂಬರುವ ದಿನಗಳಲ್ಲಿ ಶೀಘ್ರದಲ್ಲಿ ಚೇತರಿಸಿಕೊಳ್ಳುವ ವಿಶ್ವಾಸವಿದೆ ಎಂದು ಐಎಂಎಫ್ ವ್ಯವಸ್ಥಾಪಕ ನಿರ್ದೇಶಕ ಡೊಮಿನಿಕ್ ಸ್ಟ್ರಾಸ್ -ಖಾನ್ ತಿಳಿಸಿದ್ದಾರೆ.

ಬಹುತೇಕ ದೇಶಗಳಲ್ಲಿ ನಿರುದ್ಯೋಗ ಸಮಸ್ಯೆ ತಾಂಡವಾಡುತ್ತಿದೆ.ನಿರುದ್ಯೋಗ ಸಮಸ್ಯೆಯನ್ನು ಹೊಗಲಾಡಿಸಲು ಸಾಧ್ಯವಾಗುತ್ತಿಲ್ಲ. ಮುಂದುವರಿದ ರಾಷ್ಟ್ರಗಳಲ್ಲಿ ನಿರುದ್ಯೋಗ ಸಮಸ್ಯೆ ಉಲ್ಬಣಿಸಿದೆ ಎಂದು ಹೇಳಿದ್ದಾರೆ.

ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಆರ್ಥಿಕ ವೃದ್ಧಿ ದರ, ಮುಂಬರುವ 2014ರಲ್ಲಿ ಶೇ.14ಕ್ಕೆ ತಲುಪುವ ಸಾಧ್ಯತೆಗಳಿವೆ. ಆದ್ದರಿಂದ ಜಗತ್ತಿನ ಹಲವಾರು ರಾಷ್ಟ್ರಗಳು ಇವತ್ತಿಗೂ ಆರ್ಥಿಕ ಬಿಕ್ಕಟ್ಟಿನಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲವೆನ್ನುವುದು ಸಾಬೀತಾಗುತ್ತದೆ ಎಂದು ಖಾನ್ ತಿಳಿಸಿದ್ದಾರೆ.

ಸರಕಾರಗಳು ಉತ್ತೇಜನ ಪ್ಯಾಕೇಜ್‌ಗಳನ್ನು ಘೋಷಿಸಿದ್ದರಿಂದ, ಜಾಗತಿಕ ಆರ್ಥಿಕತೆ ಅಲ್ಪ ಮಟ್ಟಿಗೆ ಚೇತರಿಸಿಕೊಂಡಿದೆ.ಉತ್ತೇಜನ ಪ್ಯಾಕೇಜ್‌ಗಳನ್ನು ಸ್ಥಗಿತಗೊಳಿಸಿದಲ್ಲಿ ಮತ್ತೆ ಆರ್ಥಿಕ ಸಂಕ್ಷ್ಟ ಎದುರಾಗುವ ಸಾಧ್ಯತೆಗಳಿವೆ ಎಂದು ಐಎಂಎಫ್ ವ್ಯವಸ್ಥಾಪಕ ನಿರ್ದೇಶಕ ಸ್ಟ್ರಾಸ್ ಖಾನ್ ಎಚ್ಚರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ