ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಎಂಟಿಎನ್‌ಎಲ್‌ನಿಂದ 3ಜಿ ಮೊಬೈಲ್ ಟಿವಿ ಸೇವೆ (MTNL | 3G mobile TV service | Alcatel Lucent | Aksh Optifibre)
Bookmark and Share Feedback Print
 
ಸರಕಾರಿ ಸ್ವಾಮ್ಯದ ಎಂಟಿಎನ್‌ಎಲ್, ಅಕ್ಷ ಆಪ್ಟಿ ಫೈಬರ್ ಮತ್ತು ಅಲ್ಕಾಟೆಲ್ ಲುಸೆಂಟ್‌ ಕಂಪೆನಿಗಳ ಜಂಟಿ ಸಹಭಾಗಿತ್ವದಲ್ಲಿ 3ಜಿ ಮೊಬೈಲ್ ಟಿವಿ ಸೇವೆಗಳನ್ನು ಆರಂಭಿಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಮೊಬೈಲ್ ಟಿವಿ ಸೇವೆಗಳಲ್ಲಿ ಮಲ್ಟಿಮೀಡಿಯಾ ಮತ್ತು ಎಂಟರ್‌ಟೈನ್‌ಮೆಂಟ್‌ ವಿಭಾಗಗಳನ್ನು ಹೊಂದಿರುತ್ತಿದೆ. ದೆಹಲಿ ಮತ್ತು ಮುಂಬೈ ಗ್ರಾಹಕರು ಈ ಸೌಲಭ್ಯವನ್ನು ಪಡೆಯಬಹುದಾಗಿದೆ.

ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ 3ಜಿ ಮೊಬೈಲ್ ಸೇವೆಗಳನ್ನು ವಾಣಿಜ್ಯಿಕವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವುದಕ್ಕೆ ಹೆಮ್ಮೆಯಾಗಿದೆ. ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಲಾಗಿದ್ದರಿಂದ ಟಿಲಿವಿಜನ್‌ ಚಾನೆಲ್‌ಗಳ ಲೈವ್ ಪ್ರಸಾರವನ್ನು ಪಡೆಯಬಹುದಾಗಿದೆ ಎಂದು ಕಂಪೆನಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ