ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಮಾರುತಿಯಿಂದ ನೂತನ ವಾಗನ್‌ ಆರ್‌ ಮಾರುಕಟ್ಟೆಗೆ (Maruti Suzuki | WagonR)
Bookmark and Share Feedback Print
 
ದೇಶದ ಕಾರು ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಝುಕಿ ಕಂಪೆನಿ ವ್ಯಾಗನ್ ಆರ್‌ ಮಾಡೆಲ್‌ನ ನೂತನ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, 3.28 ಮತ್ತು 3.81ಲಕ್ಷ ರೂಪಾಯಿಗಳ ದರವನ್ನು ನಿಗದಿಪಡಿಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ನೂತನ ಆವೃತ್ತಿಯ ವಾಗನ್‌ ಆರ್‌ ಮಾಡೆಲ್ ಕಾರು ಹಲವು ಕಾರಣಗಳಿಂದ ಮಾರುತಿ ಸುಝುಕಿ ಕಂಪೆನಿಗೆ ಮಹತ್ವದ್ದಾಗಿದೆ. ಇದರಿಂದ ಕಂಪೆನಿ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಮಹತ್ತರಪಾತ್ರವಹಿಸಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಶಿಂಝೋ ನಕಾನಿಶಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ನೂತನ ವಾಗನ್ ಆರ್ ಮಾಡೆಲ್ ಕಾರಿಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗಿದ್ದು,998ಸಿಸಿ ಕೆ.ಸೀರಿಸ್ ಇಂಜಿನ್ ಅಳವಡಿಸಲಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ