ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಹಣದುಬ್ಬರ ದರ ನಿಯಂತ್ರಣಕ್ಕೆ ಸೂಕ್ತ ಕ್ರಮ: ಮೀನಾ (Anti-inflation | Financial year | Price index | Fuel prices | Food prices)
Bookmark and Share Feedback Print
 
ಮುಂಬರುವ ಮಾರ್ಚ್ 2011ರವರೆಗೆ ಹಣದುಬ್ಬರವನ್ನು ನಿಯಂತ್ರಿಸಲು ಸರಕಾರ ಕಠಿಣ ಕ್ರಮಗಳನ್ನು ಮುಂದುವರಿಸಿದೆ ಎಂದು ಕೇಂದ್ರ ವಿತ್ತ ಖಾತೆ ರಾಜ್ಯ ಸಚಿವ ನಮೋ ನರೈನ್ ಮೀನಾ ಲೋಕಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಅಹಾರ, ಇಂಧನ ದರಗಳ ಏರಿಕೆಯಿಂದಾಗಿ ದೇಶದ ಸಗಟು ಸೂಚ್ಯಂಕ ದರ 17 ತಿಂಗಳುಗಳ ಗರಿಷ್ಠ ಏರಿಕೆ ಕಂಡಿದ್ದು, ಮಾರ್ಚ್ ತಿಂಗಳ ಅವಧಿಯಲ್ಲಿ ಶೇ.9.90ಕ್ಕೆ ಏರಿಕೆ ಕಂಡಿದೆ.

ದೇಶದ ಇಂಧನ ಸೂಚ್ಯಂಕ ದರ ಏಪ್ರಿಲ್ 10ರವರೆಗಿನ 12 ತಿಂಗಳುಗಳ ಅವಧಿಯಲ್ಲಿ ಶೇ.12.45ಕ್ಕೆ ಏರಿಕೆಯಾಗಿದೆ. ಏತನ್ಮಧ್ಯೆ, ಅಹಾರ ಸೂಚ್ಯಂಕ ದರ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಶೇ.17.65ಕ್ಕೆ ಏರಿಕೆಯಾಗಿದೆ ಎಂದು ಸರಕಾರ ಬಿಡುಗಡೆ ಮಾಡಿದ ಅಂಕಿ ಅಂಶಗಳು ಖಚಿತಪಡಿಸಿವೆ.

ಹಣದುಬ್ಬರವನ್ನು ನಿಯಂತ್ರಿಸಲು ಕೇಂದ್ರ ರಿಸರ್ವ್ ಬ್ಯಾಂಕ್, 25 ಬೇಸಿಸ್ ಪಾಯಿಂಟ್‌ಗಳಷ್ಟು ರೆಪೋ ದರಗಳಲ್ಲಿ ಹೆಚ್ಚಳಗೊಳಿಸಿದ್ದು, ಅಗತ್ಯವಾದಲ್ಲಿ ಮತ್ತಷ್ಟು ರೆಪೋ ದರಗಳನ್ನು ಹೆಚ್ಚಿಸುವುದಾಗಿ ಹೇಳಿಕೆ ನೀಡಿದೆ.
ಸಂಬಂಧಿತ ಮಾಹಿತಿ ಹುಡುಕಿ