ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಐಸಿಐಸಿಐ ಬ್ಯಾಂಕ್‌ನಿಂದ ನೂತನ ಗೃಹ ಸಾಲ ಯೋಜನೆ (ICICI Bank | Home loan | Interest Rate)
Bookmark and Share Feedback Print
 
ದೇಶದ ಖಾಸಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಐಸಿಐಸಿಐ ಬ್ಯಾಂಕ್, ನೂತನ ಗೃಹ ಸಾಲ ಯೋಜನೆಯನ್ನು ಆರಂಭಿಸಲಾಗಿದ್ದು, ಆರಂಭಿಕ ವರ್ಷದಲ್ಲಿ ಶೇ.8.25ರಷ್ಟು ಬಡ್ಡಿ ದರವನ್ನು ವಿಧಿಸಲಾಗುತ್ತದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.

ನೂತನ ಗೃಹಸಾಲ ಯೋಜನೆಯನ್ವಯ ಆರಂಭಿಕ ವರ್ಷದಲ್ಲಿ ಶೇ.8.25ರಷ್ಟು ಬಡ್ಡಿ ದರ, ಎರಡನೇ ವರ್ಷದಲ್ಲಿ ಶೇ.9ರಷ್ಟು ಬಡ್ಡಿ ದರವನ್ನು ವಿಧಿಸಲಾಗುತ್ತದೆ. ನಂತರದ ವರ್ಷಗಳಲ್ಲಿ ಅಸ್ತಿತ್ವಕ್ಕಿರುವ ಬಡ್ಡಿ ದರವನ್ನು ನೀಡಬೇಕಾಗುತ್ತದೆ. ಆದರೆ ನೂತನ ಯೋಜನೆಯನ್ನು ಯಾವಾಗ ಆರಂಭಿಸಲಾಯಿತು ಎನ್ನುವುದನ್ನು ಹೇಳಲು ಬ್ಯಾಂಕ್ ಮೂಲಗಳು ನಿರಾಕರಿಸಿವೆ.

ಎಚ್‌ಡಿಎಫ್‌ಸಿ ಬ್ಯಾಂಕ್ ಏಪ್ರಿಲ್ 15 ರಂದು ಘೋಷಿಸಿದಂತೆ, ಅದೇ ಯೋಜನೆಯನ್ನು ಐಸಿಐಸಿಐ ಬ್ಯಾಂಕ್ ಕೂಡಾ ಘೋಷಿಸಿ ಬ್ಯಾಂಕಿಂಗ್ ವಲಯದಲ್ಲಿ ಅಚ್ಚರಿ ಮೂಡಿಸಿದೆ.

ಸ್ಟೇಟ್‌ಬ್ಯಾಂಕ್ ಇಂಡಿಯಾ ಬ್ಯಾಂಕ್, ಏಪ್ರಿಲ್ 30 ರೊಳಗೆ ಗೃಹ ಸಾಲ ಪಡೆಯುವ ಗ್ರಾಹಕರಿಗೆ, ಆರಂಭಿಕ ವರ್ಷದಲ್ಲಿ ಶೇ.8ರಷ್ಟು ಹಾಗೂ ಎರಡನೇ ವರ್ಷ ಮತ್ತು ಮೂರನೇ ವರ್ಷದ ಅವಧಿಯಲ್ಲಿ ಶೇ.9ರಷ್ಟು ಬಡ್ಡಿ ದರವನ್ನು ಒದಗಿಸಲಾಗುವುದು ಎಂದು ಎಸ್‌ಬಿಐ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ