ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಚೀನಾದಲ್ಲಿ 18 ಮಿಲಿಯನ್ 3ಜಿ ಗ್ರಾಹಕರು (China | 3G mobile | Xinhua telecommunication | MIIT)
Bookmark and Share Feedback Print
 
ಚೀನಾದಲ್ಲಿ 3ಜಿ ಮೊಬೈಲ್ ಬಳಕೆದಾರರ ಸಂಖ್ಯೆ, ಮಾರ್ಚ್ ತಿಂಗಳ ಅಂತ್ಯಕ್ಕೆ 18.08 ಮಿಲಿಯನ್‌‌ಗಳಿಗೆ ತಲುಪಿದೆ ಎಂದು ಝಿನ್‌ಹುವಾ ಮೂಲಗಳು ತಿಳಿಸಿವೆ.

ಚೀನಾದ ಮೊಬೈಲ್ ಮಾರುಕಟ್ಟೆಯಲ್ಲಿ 3ಜಿ ಬಳಕೆದಾರರ ಸಂಖ್ಯೆ ಶೇ.42.5ರಷ್ಟಿದ್ದು, ಚೀನಾ ಟೆಲಿಕಾಂ ಮೊಬೈಲ್ ಶೇ.30.8,ಚೀನಾದ ಯುನಿಕಾಂ ಸಂಸ್ಥೆ ಶೇ.26.7ರಷ್ಟು ಪಾಲನ್ನು ಹೊಂದಿದೆ ಎಂದು ಟೆಲಿಕಾಂ ಸಚಿವಾಲಯದ ಉಪನಿರ್ದೇಶಕ ಝುವಾ ಜುನ್ ಹೇಳಿದ್ದಾರೆ.

ಮೂರು ಟೆಲಿಕಾಂ ಕಂಪೆನಿಗಳು ಆರಂಭಿಕ ಮೂರು ತಿಂಗಳ ಅವಧಿಯಲ್ಲಿ 3ಜಿ ನೆಟ್‌ವರ್ಕ್ ವಿಸ್ತರಣೆಯಲ್ಲಿ 878.9 ಮಿಲಿಯನ್ ಡಾಲರ್‌ಗಳ ಹೂಡಿಕೆಯನ್ನು ಮಾಡಿವೆ. ಪ್ರಸಕ್ತ ವರ್ಷದಲ್ಲಿ 95 ಬಿಲಿಯನ್ ಯುವಾನ್ ಹೂಡಿಕೆ ಮಾಡಲು ನಿರ್ಧರಿಸಿವೆ ಎಂದು ಝಿನ್ ಗುವಾಬಿನ್ ತಿಳಿಸಿದ್ದಾರೆ.

ಮುಂಬರುವ 2011ರ ವೇಳೆಗೆ 3ಜಿ ಗ್ರಾಹಕರ ಸಂಖ್ಯೆ 150 ಮಿಲಿಯನ್‌ಗಳಿಗೆ ತಲುಪಲಿದೆ ಎಂದು ಟೆಲಿಕಾಂ ಸಚಿವಾಲಯದ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ