ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಕಾರ್ಪೋರೇಶನ್ ಬ್ಯಾಂಕ್‌ಗೆ 312 ಕೋಟಿ ನಿವ್ವಳ ಲಾಭ (Corporation Bank | Net profit | BSE | Quarter)
Bookmark and Share Feedback Print
 
ಸಾರ್ವಜನಿಕ ಸ್ವಾಮ್ಯದ ಕಾರ್ಪೋರೇಶನ್ ಬ್ಯಾಂಕ್, ಮಾರ್ಚ್ 31ಕ್ಕೆ ಅಂತ್ಯಗೊಂಡಂತೆ ನಿವ್ವಳ ಲಾಭದಲ್ಲಿ ಶೇ.19.89ರಷ್ಟು ಏರಿಕೆಯಾಗಿ 312.32 ಕೋಟಿ ರೂಪಾಯಿಗಳಿಗೆ ತಲುಪಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.

2010ರ ಮಾರ್ಚ್‌ಗೆ ವರ್ಷಾಂತ್ಯಗೊಂಡಂತೆ ಕ್ರೂಢೀಕೃತ ನಿವ್ವಳ ಲಾಭ 1,181.34 ಕೋಟಿ ರೂಪಾಯಿಗಳಿಗೆ ತಲುಪಿದೆ. ಕಳೆದ ವರ್ಷದ ಅವಧಿಯಲ್ಲಿ 900.32 ಕೋಟಿ ರೂಪಾಯಗಳಾಗಿತ್ತು ಎಂದು ಕಾರ್ಪೋರೇಶನ್ ಬ್ಯಾಂಕ್ ಮುಂಬೈ ಶೇರುಪೇಟೆಗೆ ಸಲ್ಲಿಸಿದ ಮಾಹಿತಿಯಲ್ಲಿ ಬಹಿರಂಗಪಡಿಸಿದೆ.

ಕಾರ್ಪೋರೇಶನ್ ಬ್ಯಾಂಕ್ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ 1,922.20 ಕೋಟಿ ರೂಪಾಯಿಗಳ ಬಡ್ಡಿ ಆದಾಯವನ್ನು ಪಡೆದಿದೆ. ಕಳೆದ ವರ್ಷದ ಅವಧಿಯಲ್ಲಿ 1,706.38 ಕೋಟಿ ರೂಪಾಯಿಗಳಾಗಿತ್ತು.

ಬ್ಯಾಂಕ್‌ನ ಅಡಳಿತ ಮಂಡಳಿ ಶೇರುದಾರರ ಪ್ರತಿ ಶೇರಿಗೆ 16.50 ರೂಪಾಯಿಗಳ ಡೆವಿಡೆಂಡ್ ಘೋಷಿಸಿದೆ.

ಇಂದಿನ ಶೇರುಪೇಟೆಯಲ್ಲಿ ಕಾರ್ಪೋರೇಶನ್ ಬ್ಯಾಂಕ್ ಶೇರು ದರದಲ್ಲಿ ಶೇ.0.02ರಷ್ಟು ಇಳಿಕೆ ಕಂಡು 500.50 ರೂಪಾಯಿಗಳಿಗೆ ತಲುಪಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ