ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಆಹಾರೇತರ ವಸ್ತುಗಳಿಗೆ ಹಣದುಬ್ಬರ ವರ್ಗಾವಣೆ: ಪ್ರಣಬ್ (Food inflation | Non-food items | Pranab Mukherjee)
Bookmark and Share Feedback Print
 
ಅಹಾರ ಧಾನ್ಯಗಳ ದರಗಳಲ್ಲಿ ಇಳಿಕೆ ಆರಂಭವಾಗಿರುವ ಮಧ್ಯೆಯು ಹಣದುಬ್ಬರ ದರ ಆಹಾರೇತರ ವಸ್ತುಗಳಿಗೆ ವರ್ಗಾವಣೆಗೆಯಾಗುವ ಸಾಧ್ಯತೆಗಳಿವೆ ಎಂದು ಕೇಂದ್ರ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ.

ಅಹಾರ ಧಾನ್ಯ ವಸ್ತುಗಳ ದರಗಳು ಇಳಿಕೆಯಾಗಲು ಆರಂಭಿಸಿದರೂ ಹಣದುಬ್ಬರ ದರ ಆಹಾರೇತರ ವಸ್ತುಗಳಿಗೆ ವರ್ಗಾವಣೆಯಾಗುವ ಆತಂಕ ಕಾಡುತ್ತಿದೆ ಎಂದು ಎಕ್ಸಿಮ್ ಬ್ಯಾಂಕ್ ಉದ್ಘಾಟನಾ ಸಮಾರಂಭದಲ್ಲಿ ಮುಖರ್ಜಿ ತಿಳಿಸಿದ್ದಾರೆ.

ಏತನ್ಮಧ್ಯೆ, ಭಾರತೀಯ ರಿಸರ್ವ್ ಬ್ಯಾಂಕ್‌ನ ಮುಖ್ಯ ಆರ್ಥಿಕ ಸಲಹೆಗಾರ ಕೌಶಿಕ್ ಬಸು ಮಾತನಾಡಿ, ಹಣದುಬ್ಬರ ನಿಧಾನವಾಗಿ ಆಹಾರೇತರ ವಸ್ತುಗಳಿಗೆ ವರ್ಗಾಯಿಸುತ್ತಿದೆ. ಆದರೆ ಮೇ ತಿಂಗಳ ಅಂತ್ಯಕ್ಕೆ ಇಳಿಕೆಯಾಗಲಿದೆ ಎಂದು ಹೇಳಿದ್ದಾರೆ.

ಆಹಾರ ಹಣದುಬ್ಬರ ದರ, ಫೆಬ್ರವರಿ ತಿಂಗಳಾಂತ್ಯಕ್ಕೆ ಶೇ.17.81ರಷ್ಟಿದ್ದ ಹಣದುಬ್ಬರ ದರ, ಮಾರ್ಚ್ ತಿಂಗಳಾಂತ್ಯಕ್ಕೆ ಶೇ. 16.3ಕ್ಕೆ ಇಳಿಕೆಗೊಂಡಿದೆ.

ಒಟ್ಟಾರೆ, ಹಣದುಬ್ಬರ ದರ ಜನೆವರಿ ತಿಂಗಳಲ್ಲಿ ಶೇ.8.56ಕ್ಕೆ ಏರಿಕೆ ಕಂಡಿದ್ದು, ಫೆಬ್ರವರಿ ತಿಂಗಳ ಅವಧಿಯಲ್ಲಿ ಶೇ.9.89ರಷ್ಟು ಏರಿಕೆ ಕಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ