ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಯುನಿನಾರ್‌ನಿಂದ ಪ್ರೀ-ಪೇಡ್ ಗ್ರಾಹಕರಿಗೆ ಡಟಾ ಸೇವೆ (Uninor | Data services | Pre-paid | Launch | Subscribers)
Bookmark and Share Feedback Print
 
ನಾರ್ವೆ ಟೆಲಿಕಾಂ ಕಂಪೆನಿ ಹಾಗೂ ಭಾರತದ ರಿಯಲ್ ಎಸ್ಟೇಟ್‌ ಉದ್ಯಮ ಸಂಸ್ಥೆಯಾದ ಯುನಿಟೆಕ್ ಜಂಟಿ ಸಹಭಾಗಿತ್ವದ ಯುನಿನಾರ್ ಟೆಲಿಕಾಂ ಕಂಪೆನಿ, ಪೂರ್ವ-ಪಾವತಿ ಗ್ರಾಹಕರಿಗಾಗಿ ಡಟಾ ಸೇವೆಯನ್ನು ಆರಂಭಿಸಿದೆ.

ಉತ್ತರಪ್ರದೇಶ, ಉತ್ತರಾಂಚಲ, ಬಿಹಾರ್, ಜಾರ್ಖಂಡ್, ಒರಿಸ್ಸಾ, ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಆಂಧ್ರಪ್ರದೇಶಗಳ ಯುನಿನಾರ್ ಗ್ರಾಹಕರಿಗೆ ನೂತನ ಸೇವೆ ಲಭ್ಯವಾಗಲಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಯುನಿನಾರ್ ಟೆಲಿಕಾಂ ಕಂಪೆನಿ ಶೀಘ್ರದಲ್ಲಿ ಮತ್ತಷ್ಟು ಹೊಸ ಸೇವೆಗಳನ್ನು ಶೀಘ್ರದಲ್ಲಿ ಆರಂಭಿಸಲಿದೆ ಎಂದು ಯುನಿನಾರ್ ಮಾರುಕಟ್ಟೆ ಉಪಾಧ್ಯಕ್ಷ ಡೇವಿಡ್ ಮೆನೆಘೆಲ್ಲೊ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎರಡು ಯೋಜನೆಗಳಲ್ಲಿ ಮೈ ಕನೆಕ್ಟ್‌ 9 ಯೋಜನೆಯಲ್ಲಿ 9 ರೂಪಾಯಿಗಳನ್ನು ಪಾವತಿಸಿ (3ದಿನಗಳ ಅವಧಿಯಲ್ಲಿ 60 ಎಂಬಿವರೆಗೆ ಉಚಿತವಾಗಿ)ಡೌನ್‌ಲೋಡ್‌ ಮಾಡಬಹುದಾಗಿದೆ. ಮೈಕನೆಕ್ಟ್‌90 ಎನ್ನುವ ಎರಡನೇಯ ಯೋಜನೆಯಲ್ಲಿ 30 ದಿನಗಳವರೆಗೆ 3ಜಿಬಿ ಉಚಿತ ಬ್ರೌಸಿಂಗ್ ಮಾಡಬಹುದಾಗಿದೆ.

ಎರಡು ಯೋಜನೆಗಳಲ್ಲಿ ಗ್ರಾಹಕರು ಜನಪ್ರಿಯ ಸೋಶಿಯಲ್ ನೆಟ್‌ವರ್ಕಿಂಗ್ ಸೈಟ್‌ಗಳಾದ ಫೇಸ್‌ ಬುಕ್, ಟ್ವಿಟ್ಟರ್ ಸೇರಿದಂತೆ ಇತರ ಸೇವೆಗಳನ್ನು ಉಚಿತವಾಗಿ ಪಡೆಯಬಹುದಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ