ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಜನರಲ್ ಮೋಟಾರ್ಸ್ ವಾಹನ ಮಾರಾಟದಲ್ಲಿ ದ್ವಿಗುಣ (General Motors | SAIC | China | Sales | Commercial vehicles)
Bookmark and Share Feedback Print
 
ಜಾಗತಿಕ ಖ್ಯಾತಿಯ ವಾಹನೋದ್ಯಮ ತಯಾರಿಕೆ ಸಂಸ್ಥೆಯ ಜನರಲ್ ಮೋಟಾರ್ಸ್‌ ಚೀನಾದ ಸೈಕ್ ಕಂಪೆನಿಯೊಂದಿಗೆ ಜಂಟಿ ಸಹಭಾಗಿತ್ವದಲ್ಲಿ ವಾಣಿಜ್ಯ ವಾಹನಗಳ ತಯಾರಿಕೆಯಲ್ಲಿ ತೊಡಗಿದ್ದು, ಪ್ರಸಕ್ತ ವರ್ಷದ ಅವಧಿಯ ವಹಿವಾಟು ದ್ವಿಗುಣಗೊಳ್ಳುವ ವಿಶ್ವಾಸವಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಪ್ರಯಾಣಿಕ ವಾಹನಗಳ ಮಾರಾಟದಲ್ಲಿ ಚೇತರಿಕೆ ಕಂಡಿದೆ. ಪ್ರಸಕ್ತ ವರ್ಷದ ಅವಧಿಯ ಮಾರಾಟದಲ್ಲಿ ದ್ವಿಗುಣವಾಗುವ ನಿರೀಕ್ಷೆಯಿದೆ ಎಂದು ಜನರಲ್ ಮೋಟಾರ್ಸ್‌ನ ಅಂತಾರಾಷ್ಟ್ರೀಯ ವ್ಯವಹಾರಗಳ ಅಧ್ಯಕ್ಷ ಟಿಮ್ ಲಿ ಹೇಳಿದ್ದಾರೆ.

2009ರ ಅವಧಿಯಲ್ಲಿ 70,000 ವಾಹನಗಳನ್ನು ಮಾರಾಟ ಮಾಡಲಾಗಿದ್ದು, 2010ರಲ್ಲಿ ಸುಮಾರು 130,000 ವಾಹನಗಳನ್ನು ಮಾರಾಟ ಮಾಡುವ ನಿರೀಕ್ಷೆಯಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಜನರಲ್ ಮೋಟಾರ್ಸ್ ಸಂಸ್ಥೆ, ಚೀನಾ, ಭಾರತ, ರಷ್ಯಾ, ಮಧ್ಯಪ್ರಾಚ್ಯ ರಾಷ್ಟ್ರಗಳು ಹಾಗೂ ಆಫ್ರಿಕಾ ರಾಷ್ಟ್ರಗಳಿಗೆ ವಾಹನಗಳನ್ನು ರಫ್ತು ಮಾಡುತ್ತಿದೆ.

ಜನರಲ್ ಮೋಟಾರ್ಸ್ ಸಂಸ್ಥೆ 2009ರ ಅವಧಿಯಲ್ಲಿ 4.3 ಬಿಲಿಯನ್ ಡಾಲರ್ ವಹಿವಾಟು ನಡೆಸಿದೆ.ಕಳೆದ ವರ್ಷ ದಿವಾಳಿಗೊಳಗಾಗಿದ್ದ ಸಂಸ್ಥೆ ಶೀಘ್ರದಲ್ಲಿ ಚೇತರಿಸಿಕೊಂಡಿದೆ ಎಂದು ಟಿಮ್ ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ