ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ವಿದೇಶಿ ಬ್ಯಾಂಕ್‌ಗಳ ಖರೀದಿಗೆ ಎಸ್‌ಬಿಐ ಮುಕ್ತ:ಭಟ್ (SBI | OP Bhatt | Acquisitions | Overseas | Businesses)
Bookmark and Share Feedback Print
 
ದೇಶದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಗ್ರಸ್ಥಾನದಲ್ಲಿರುವ ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾ, ವಹಿವಾಟಿಗೆ ಪೂರಕವಾದಲ್ಲಿ ವಿದೇಶಿ ಬ್ಯಾಂಕ್‌ಗಳ ಖರೀದಿಗೆ ಮುಕ್ತವಾಗಿದೆ ಎಂದು ಬ್ಯಾಂಕ್‌ ಮೂಲಗಳು ತಿಳಿಸಿವೆ.

ಖರೀದಿಸುವ ವಿದೇಶಿ ಬ್ಯಾಂಕ್‌ಗಳು ನಮ್ಮ ಪರಿಸರಕ್ಕೆ,ಸಾರ್ವಜನಿಕ ಕ್ಷೇತ್ರದ ಸಂಸ್ಕ್ರತಿಗೆ, ವಹಿವಾಟಿಗೆ ಮತ್ತು ನಮ್ಮ ಗ್ರಾಹಕರಿಗೆ ಸೂಕ್ತವೆನಿಸಿದಲ್ಲಿ, ಅಂತಹ ಬ್ಯಾಂಕ್‌ಗಳ ಖರೀದಿಸಲಾಗುವುದು ಎಂದು ಎಸ್‌ಬಿಐ ಮುಖ್ಯಸ್ಥ ಒ.ಪಿ.ಭಟ್ ತಿಳಿಸಿದ್ದಾರೆ.

ಒಂದು ವೇಳೆ ಉತ್ತಮ ವಿದೇಶಿ ಬ್ಯಾಂಕ್‌ಗಳು ಖರೀದಿಗೆ ದೊರೆತಲ್ಲಿ ಅಂತಹ ಅವಕಾಶಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಹೇಳಿದ್ದಾರೆ.

ಸ್ಟೇಟ್‌ ಬ್ಯಾಂಕ್ ಆಪ್ ಇಂಡಿಯಾ ಅಂತಾರಾಷ್ಟ್ರೀಯವಾಗಿ ಬೃಹತ್ ಸಂಪರ್ಕ ಜಾಲವನ್ನು ಹೊಂದಿದ್ದು, ವಿದೇಶದಲ್ಲಿರುವ ಶಾಖೆಗಳಿಂದ ಶೇ.14ರಷ್ಟು ಆದಾಯವನ್ನು ಗಳಿಸುತ್ತಿದೆ. 2008-09ರ ಅವಧಿಯ ನಿವ್ವಳ ಲಾಭದಲ್ಲಿ ಶೇ.54ರಷ್ಟು ಏರಿಕೆಯಾಗಿ 56,196 ಕೋಟಿ ರೂಪಾಯಿಗಳಿಂದ 86,267 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ.

ಮಾರ್ಚ್ 2009ರ ಅಂತ್ಯಕ್ಕೆ ಎಸ್‌ಬಿಐ ಬ್ಯಾಂಕ್, ವಿದೇಶಗಳಲ್ಲಿ 92 ಶಾಖೆಗಳನ್ನು ಹೊಂದಿದ್ದು, 32 ರಾಷ್ಟ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಒ.ಪಿ ಭಟ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ