ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಲಕ್ಷ್ಮಿ ಮಿತ್ತಲ್ ಬ್ರಿಟನ್‌ನ ಶ್ರೀಮಂತ ಉದ್ಯಮಿ (Lakshmi Mittal | UK's richest | London | Sunday Times)
Bookmark and Share Feedback Print
 
ಬ್ರಿಟನ್‌ನಲ್ಲಿ ವಾಸ್ತವ್ಯ ಹೂಡಿರುವ ಸ್ಟೀಲ್ ಕಂಪನಿ ದಿಗ್ಗಜ ಲಕ್ಷ್ಮಿ ಮಿತ್ತಲ್ ಬ್ರಿಟನ್‌ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಮತ್ತೊಮ್ಮೆ ಹೊರಹೊಮ್ಮಿರುವುದಾಗಿ ಸಂಡೇ ಟೈಮ್ಸ್ ಸಮೀಕ್ಷೆ ತಿಳಿಸಿದೆ.

ಬ್ರಿಟನ್‌ನಲ್ಲಿ ಸುಮಾರು ಸಾವಿರ ಮಂದಿ ಶ್ರೀಮಂತರ ಆರ್ಥಿಕ ವಹಿವಾಟಿನಿಂದಾಗಿ ದೇಶದ ಆರ್ಥಿಕ ಸ್ಥಿತಿ ಶೇ.30ರಷ್ಟು ಪ್ರಗತಿ ಹೊಂದಿರುವುದಾಗಿಯೂ ಸಮೀಕ್ಷೆ ವಿವರಿಸಿದೆ. ಏರ್‌ಸೆಲೋರ್ ಮಿತ್ತಲ್ ಕಂಪನಿಯ ಸಿಇಓ ಆಗಿರುವ ಲಕ್ಷ್ಮಿ ಮಿತ್ತಲ್ ಬ್ರಿಟನ್‌ನ ಶ್ರೀಮಂತರ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿದ್ದು, 10.8ಬಿಲಿಯನ್ ಸಂಪತ್ತು ಹೊಂದಿದ್ದ ಮಿತ್ತಲ್ ಈ ಬಾರಿ 22.45 ಬಿಲಿಯನ್‌ನೊಂದಿಗೆ ಪ್ರಥಮ ಸ್ಥಾನಕ್ಕೇರಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

ಅಲ್ಲದೇ ರಷ್ಯಾದ ರೋಮನ್ ಅಬ್ರಾಮೂವಿಚ್, ಚೆಲ್ಸಿಯಾ ಫುಟ್ಬಾಲ್ ಕ್ಲಬ್ ಮಾಲೀಕ 7.4ಬಿಲಿಯನ್ ಪೌಂಡ್ಸ್ ಸಂಪತ್ತಿನೊಂದಿಗೆ 60ನೇ ಸ್ಥಾನ ಪಡೆದಿದ್ದಾರೆ. ಬ್ರಿಟಿಷ್ ಸಂಜಾತ ಬಿಲಿಯನೇರ್ ಡ್ಯೂಕ್ ಆಫ್ ವೆಸ್ಟ್ ಮಿನಿಸ್ಟರ್ ತೃತೀಯ ಸ್ಥಾನ ಗಳಿಸಿದ್ದಾರೆ. ಭಾರತೀಯ ಮೂಲದ ಉದ್ಯಮಿ ಅನಿಲ್ ಅಗರ್‌ವಾಲ್ ಹತ್ತನೇ ಸ್ಥಾನಕ್ಕೆ ಏರಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ