ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಫಾರೆಕ್ಸ್: ರೂಪಾಯಿ ಮೌಲ್ಯ ಬಲವರ್ಧನೆ (Foreign exchange| Rupee | Dollar)
Bookmark and Share Feedback Print
 
ವಿದೇಶಿ ಬಂಡವಾಳದ ಒಳಹರಿವು ಹೆಚ್ಚಳವಾದ ಹಿನ್ನೆಲೆಯಲ್ಲಿ, ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ 13 ಪೈಸೆ ಏರಿಕೆಯಾಗಿ 44.30 ರೂಪಾಯಿಗಳಿಗೆ ತಲುಪಿದೆ ಎಂದು ಮೂಲಗಳು ತಿಳಿಸಿವೆ.

ವಿದೇಶಿ ವಿನಿಮಯ ಮಾರುಕಟ್ಟೆಯ ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ 11ಪೈಸೆ ಏರಿಕೆ ಕಂಡು 44.43/44 ರೂಪಾಯಿಗಳಿಗೆ ತಲುಪಿದೆ. ಇಂದಿನ ಆರಂಭಿಕ ವಹಿವಾಟಿನಲ್ಲಿ ಮತ್ತೆ 13 ಪೈಸೆ ಏರಿಕೆ ಕಂಡು 44.30 ರೂಪಾಯಿಗಳಿಗೆ ತಲುಪಿದೆ.

ಬ್ಯಾಂಕ್‌ಗಳಿಂದ ಡಾಲರ್‌ಗಳ ಮಾರಾಟ ಹಾಗೂ ವಿದೇಶಿ ಬಂಡವಾಳದ ಒಳಹರಿವು ಹೆಚ್ಚಳವಾಗಿದ್ದರಿಂದ, ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ ಚೇತರಿಕೆಯಾಗಿದೆ. ಆದರೆ ಸಾಗರೋತ್ತರ ಮಾರುಕಟ್ಟೆಗಳಲ್ಲಿ ಡಾಲರ್ ಮೌಲ್ಯದಲ್ಲಿ ಏರಿಕೆಯಾಗಿದ್ದರಿಂದ ರೂಪಾಯಿ ಮೌಲ್ಯದ ಮತ್ತಷ್ಟು ಹೆಚ್ಚಳಕ್ಕೆ ಕಡಿವಾಣ ಹಾಕಿದಂತಾಗಿದೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.

ಏತನ್ಮಧ್ಯೆ, ಮುಂಬೈ ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ ಮತ್ತೆ 132.28 ಪಾಯಿಂಟ್‌ಗಳ ಏರಿಕೆ ಕಂಡು 17.826.48 ಅಂಕಗಳಿಗೆ ತಲುಪಿದೆ
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವಿದೇಶಿ ವಿನಿಮಯ, ರೂಪಾಯಿ, ಡಾಲರ್