ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಕಿಂಗ್‌ಫಿಶರ್‌ನಿಂದ ದೆಹಲಿ-ಕಾಠ್ಮಂಡು ವಿಮಾನ ಸಂಚಾರ (kingfisher, Kingfisher starts Delhi Kathmandu flights)
Bookmark and Share Feedback Print
 
ದೇಶದ ಖಾಸಗಿ ವಿಮಾನಯಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಕಿಂಗ್‌ಫಿಶರ್ ಏರ್‌ಲೈನ್ಸ್, ಪ್ರಥಮ ಬಾರಿಗೆ ದೆಹಲಿಯಿಂದ ಕಾಠ್ಮಂಡುವಿಗೆ ನೇರ ವಿಮಾನ ಸಂಚಾರ ಆರಂಭಿಸಿದೆ.ಮುಂಬೈಯಿಂದ ಕಾಠ್ಮಂಡುವಿಗೆ ನೇರ ವಿಮಾನ ಸಂಚಾರ ಆರಂಭಿಸುವ ಯೋಜನೆಯಿದೆ ಎಂದು ಮೂಲಗಳು ತಿಳಿಸಿವೆ.

ಕಿಂಗ್‌ಫಿಶರ್ ವಿಮಾನಯಾನ ಸಂಸ್ಥೆ, ಶುಕ್ರವಾರದಿಂದ ಪ್ರತಿನಿತ್ಯ ನವದೆಹಲಿ -ಕಾಠ್ಮಂಡು ವಿಮಾನ ಸಂಚಾರ ಆರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏರಿಂಡಿಯಾ, ಜೆಟ್ ಏರ್‌ಲೈನ್ಸ್ ಮತ್ತು ಜೆಟ್ ಲೈಟ್ ಖಾಸಗಿ ವಿಮಾನಯಾನ ಸಂಸ್ಥೆಗಳು ಈಗಾಗಲೇ ನೇಪಾಳಕ್ಕೆ ವಿಮಾನ ಸಂಚಾರ ಆರಂಭಿಸಿವೆ.

ಮುಂಬರುವ ಜೂನ್ ತಿಂಗಳ ಅವಧಿಯಲ್ಲಿ ಮುಂಬೈಯಿಂದ ಕಾಠ್ಮಂಡುವಿಗೆ ನೇರ ವಿಮಾನ ಸಂಚಾರ ಆರಂಭಿಸಲಾಗುವುದು. ಕಿಂಗ್‌ಫಿಶರ್ ಸಂಸ್ಥೆ ನೂತನ A320 ಏರ್‌ಬಸ್‌ಗಳನ್ನು ಕಾಠ್ಮಂಡು ಸಂಚಾರಕ್ಕೆ ಮೀಸಲಾಗಿರಿಸಿದೆ ಎಂದು ಮೂಲಗಳು ತಿಳಿಸಿವೆ.

ಕಿಂಗ್‌ಫಿಶರ್ ಸಂಸ್ಥೆ ಕಾಠ್ಮಂಡು ಸಂಚಾರ ಆರಂಭಿಸುವ ಮುನ್ನ, ಈಗಾಗಲೇ ನವದೆಹಲಿಯಿಂದ ಕಾಠ್ಮಂಡುವಿಗೆ 42 ವಿಮಾನಗಳು ಸಂಚಾರ ಆರಂಭಿಸಿವೆ.

ಮುಂಬೈಯಿಂದ ಕಾಠ್ಮಂಡುವಿಗೆ ಪ್ರಸ್ತುತ ಏಳು ವಿಮಾನಗಳು ಪ್ರಯಾಣ ಸೇವೆಯನ್ನು ನೀಡುತ್ತಿವೆ.
ಸಂಬಂಧಿತ ಮಾಹಿತಿ ಹುಡುಕಿ