ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 7,901 ಕೋಟಿ ರೂ.ಗಳಿಗೆ ತಲುಪಿದ 3ಜಿ ಹರಾಜು (3G bandwidth | Auction | Price | Telecommunications)
Bookmark and Share Feedback Print
 
3ಜಿ ತರಂಗಾಂತರಗಳ ಹರಾಜು ಬಿಡ್ 13ನೇ ದಿನದ ಅವಧಿಯಲ್ಲಿ 125.7ರಷ್ಟು ಏರಿಕೆಯಾಗಿ, 7,901 ಕೋಟಿ ರೂಪಾಯಿಗಳಿಗೆ ತಲುಪಿದೆ ಎಂದು ಟೆಲಿಕಾಂ ಸಚಿವಾಲಯದ ಮೂಲಗಳು ತಿಳಿಸಿವೆ.

3ಜಿ ತರಂಗಾಂತರಗಳ ಹರಾಜಿನ ಆರಂಭಿಕ ಮೊತ್ತವನ್ನು ಕೇಂದ್ರ ಸರಕಾರ 3500 ಕೋಟಿ ರೂಪಾಯಿಗಳಿಗೆ ಮೀಸಲಾಗಿರಿಸಿತ್ತು.22 ಸೇವಾ ಕ್ಷೇತ್ರಗಳಲ್ಲಿ ದೆಹಲಿ 3ಜಿ ತರಂಗಾಂತರ ಬಿಡ್‌ನಲ್ಲಿ 1,083 ಕೋಟಿ ರೂಪಾಯಿಗಳಿಗೆ ತಲುಪುವ ಮೂಲಕ ಎಂದಿನಂತೆ ಅಗ್ರಸ್ಥಾನದಲ್ಲಿದೆ.

ಮುಂಬೈ, 3ಜಿ ತರಂಗಾಂತರ ಬಿಡ್ 1,080 ಕೋಟಿ ರೂಪಾಯಿಗಳಿಗೆ ತಲುಪುವ ಮೂಲಕ, ಎರಡನೇ ಸ್ಥಾನದಲ್ಲಿದೆ ಎಂದು ಟೆಲಿಕಾಂ ಮೂಲಗಳು ತಿಳಿಸಿವೆ.

ಮಹಾರಾಷ್ಟ್ರ 3ಜಿ ತರಂಗಾಂತರಗಳ ಬಿಡ್‌ನಲ್ಲಿ ಹರಾಜು ಮೊತ್ತ 769 ಕೋಟಿ ರೂಪಾಯಿ ಪಡೆಯುವ ಮೂಲಕ ಮೂರನೇ ಸ್ಥಾನದಲ್ಲಿದೆ.

ದಕ್ಷಿಣ ಭಾರತದಲ್ಲಿ ತಮಿಳುನಾಡು 747 ಕೋಟಿ ರೂಪಾಯಿಗಳ ಹರಾಜು ಮೊತ್ತವನ್ನು ಪಡೆಯುವ ಮೂಲಕ, ನಾಲ್ಕನೇ ಸ್ಥಾನದಲ್ಲಿದೆ. ದೆಹಲಿ, ಮುಂಬೈ, ಮಹಾರಾಷ್ಟ್ರ ಮತ್ತು ತಮಿಳುನಾಡು 3ಜಿ ಹರಾಜಿನ ಆರಂಭಿಕ ಮೊತ್ತ 320 ಕೋಟಿ ರೂಪಾಯಿಗಳಾಗಿತ್ತು.

ಆಸ್ಸಾಂ, ಒರಿಸ್ಸಾ ಮತ್ತು ಜಮ್ಮು ಕಾಶ್ಮಿರಗಳ 3ಜಿ ತರಂಗಾಂತರಗಳ ಹರಾಜು ಬಿಡ್‌ನಲ್ಲಿ ಯಾವುದೇ ಬಿಡ್‌ದಾರರು ಪಾಲ್ಗೊಳ್ಳಲಿಲ್ಲ. ರಾಜಸ್ಥಾನ ಮತ್ತು ಮಧ್ಯಪ್ರದೇಶಗಳಲ್ಲಿ ಶುಕ್ರವಾರದಂದು ನಡೆದ 3ಜಿ ಹರಾಜಿನಲ್ಲಿ, ಯಾವುದೇ ಬಿಡ್‌ದಾರರು ಪಾಲ್ಗೊಂಡಿಲ್ಲವೆಂದು ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ