ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಎಸ್‌ಬಿಎಚ್‌ಗೆ 823 ಕೋಟಿ ರೂಪಾಯಿ ನಿವ್ವಳ ಲಾಭ (SBH | Financial year | Net profit | Renu Challu | Fiscal)
Bookmark and Share Feedback Print
 
ಸರಕಾರಿ ಸ್ವಾಮ್ಯದ ಸ್ಟೇಟ್‌ ಬ್ಯಾಂಕ್ ಆಫ್ ಹೈದ್ರಾಬಾದ್, 2010 ಮೇ 31ಕ್ಕೆ ವರ್ಷಾಂತ್ಯಗೊಂಡಂತೆ, ನಿವ್ವಳ ಲಾಭದಲ್ಲಿ ಶೇ.34ರಷ್ಟು ಏರಿಕೆಯಾಗಿ 823 ಕೋಟಿ ರೂಪಾಯಿಗಳಿಗೆ ತಲುಪಿದೆ.

ಜನೆವರಿ-ಮಾರ್ಚ್ 2009-10ರ ಸಾಲಿನ ಅವಧಿಯ ನಿವ್ವಳ ಲಾಭದಲ್ಲಿ, ಶೇ.49ರಷ್ಟು ಏರಿಕೆಯಾಗಿ 257 ಕೋಟಿ ರೂಪಾಯಿಗಳಾಗಿವೆ.ಕಳೆದ ವರ್ಷದ ಜನೆವರಿ-ಮಾರ್ಚ್ ತಿಂಗಳ ಅವಧಿಯ ನಿವ್ವಳ ಲಾಭ, 172 ಕೋಟಿ ರೂಪಾಯಿಗಳಿಗೆ ತಲುಪಿತ್ತು ಎಂದು ಎಸ್‌ಬಿಎಚ್ ವ್ಯವಸ್ಥಾಪಕ ನಿರ್ದೇಶಕಿ ರೇಣು ಚಲ್ಲು ತಿಳಿಸಿದ್ದಾರೆ.

ಆದಾಯ ಬಡ್ಡಿ ದರದಲ್ಲಿ ಏರಿಕೆಯಾಗಿದ್ದರಿಂದ, ನಿವ್ವಳ ಲಾಭದಲ್ಲಿ ಶೇ.27ರಷ್ಟು ಹೆಚ್ಚಳವಾಗಿ 1,963 ಕೋಟಿ ರೂಪಾಯಿಗಳಿಗೆ ತಲುಪಿದೆ.2008-09ರ ಅವಧಿಯ ನಿವ್ವಳ ಆದಾಯ 1,467 ಕೋಟಿ ರೂಪಾಯಿಗಳಾಗಿತ್ತು.

ಒಟ್ಟು ಬ್ಯಾಂಕ್‌ನ ವಹಿವಾಟು 2010ರ ಮಾರ್ಚ್ 31ಕ್ಕೆ ವರ್ಷಾಂತ್ಯಗೊಂಡಂತೆ, ವಹಿವಾಟಿನಲ್ಲಿ ಶೇ.18.15ರಷ್ಟು ಹೆಚ್ಚಳವಾಗಿ, ಸುಮಾರು 20,000 ಕೋಟಿ ರೂಪಾಯಿಗಳಿಂದ 1,29,530 ಕೋಟಿ ರೂಪಾಯಿಗಳಿಗೆ ತಲುಪಿದೆ ಎಂದು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ