ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಮಾರುತಿ ಸುಝುಕಿಗೆ 656 ಕೋಟಿ ರೂ.ನಿವ್ವಳ ಲಾಭ (Maruti Suzuki | Quarter | Net profit | Q4 | Sales)
Bookmark and Share Feedback Print
 
ದೇಶದ ಕಾರು ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಝುಕಿ, ನಾಲ್ಕನೇ ತ್ರೈಮಾಸಿಕ ಮುಕ್ತಾಯಕ್ಕೆ ನಿವ್ವಳ ಲಾಭದಲ್ಲಿ ದ್ವಿಗುಣವಾಗಿದ್ದು, 656 ಕೋಟಿ ರೂಪಾಯಿಗಳಿಗೆ ತಲುಪಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಕಚ್ಚಾ ವಸ್ತುಗಳ ದರ ಏರಿಕೆ ಹಾಗೂ ಪರಿಸರ ಸ್ನೇಹಿ ಇಂಜಿನ್‌ ಅಳವಡಿಕೆ ಇತರ ವಾಹನೋದ್ಯಮ ಕಂಪೆನಿಗಳಿಂದ ಹಲವಾರು ಮಾಡೆಲ್‌ಗಳ ಬಿಡುಗಡೆಯಿಂದಾಗಿ ಹೆಚ್ಚಿನ ಲಾಭಾಂಶದಲ್ಲಿ ಕೊರತೆಯಾಗಲು ಕಾರಣವಾಗಿದೆ ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.

ಮಾರುತಿ ಸುಝುಕಿ, ನಾಲ್ಕನೇ ತ್ರೈಮಾಸಿಕ ಮುಕ್ತಾಯಕ್ಕೆ ನಿವ್ವಳ ಲಾಭದಲ್ಲಿ ದ್ವಿಗುಣವಾಗಿದ್ದು, 656 ಕೋಟಿ ರೂಪಾಯಿಗಳಿಗೆ ತಲುಪಿದೆ. ಕಳೆದ ವರ್ಷದ ನಾಲ್ಕನೇ ತ್ರೈಮಾಸಿಕ ಅವಧಿಯ ನಿವ್ವಳ ಲಾಭ 243 ಕೋಟಿ ರೂಪಾಯಿಗಳಾಗಿತ್ತು ಎಂದು ಕಂಪೆನಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಕಳೆದ ವರ್ಷ 63.1 ಬಿಲಿಯನ್ ರೂಪಾಯಿಗಳ ವಹಿವಾಟು ನಡೆಸಿದ್ದ ಕಂಪೆನಿ, ಪ್ರಸಕ್ತ ವರ್ಷದಲ್ಲಿ ಒಟ್ಟು ನಿವ್ವಳ ಮಾರಾಟ 82.3 ಬಿಲಿಯನ್ ರೂಪಾಯಿಗಳಿಗೆ ಏರಿಕೆ ಕಂಡಿದೆ.

ದೇಶದ ಆರ್ಥಿಕತೆ ಚೇತರಿಸಿಕೊಂಡಿದ್ದರಿಂದ, 2010ರಲ್ಲಿ ಕಾರುಗಳ ಮಾರಾಟದಲ್ಲಿ ಭಾರಿ ಚೇತರಿಕೆ ಕಂಡಿದೆ. ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ಸುಲಭವಾಗಿ ಮಾರ್ಪಟ್ಟಿರುವುದರಿಂದ ವಾಹನಗಳ ಖರೀದಿಯಲ್ಲಿ ಹೆಚ್ಚಳವಾಗಿದೆ ಎಂದು ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ