ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಏಷ್ಯಾ ಅಭಿವೃದ್ಧಿಯಲ್ಲಿ ಭಾರತದ ಪಾತ್ರ ಮಹತ್ವದ್ದು (India|Asia|IMF)
Bookmark and Share Feedback Print
 
ಏಷ್ಯಾ ಖಂಡದ ಅಭಿವೃದ್ಧಿಯಲ್ಲಿ ಭಾರತ ಮಹತ್ತರ ಪಾತ್ರ ವಹಿಸುತ್ತಿದೆ ಎಂದು ಅಂತಾರಾಷ್ಟ್ರೀಯ ಹಣಸು ಸಂಸ್ಥೆ(ಐಎಂಎಫ್)ಯ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣ ಏಷ್ಯಾದಲ್ಲಿ ಇತರ ರಾಷ್ಟ್ರಗಳಿಗೆ ಹೋಲಿಸಿದಲ್ಲಿ, ಭಾರತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಮುಂಬರುವ ಕೆಲ ವರ್ಷಗಳಲ್ಲಿ ಬಲಾಢ್ಯ ಆರ್ಥಿಕ ರಾಷ್ಟ್ರವಾಗಲಿದೆ ಎಂದು ಐಎಂಎಫ್‌ನ ಏಷ್ಯಾ ಫೆಸಿಫಿಕ್ ವಿಭಾಗದ ಉಪನಿರ್ದೇಶಕಿ ಕಲ್ಪನಾ ಕೊಚ್ಚರ್ ತಿಳಿಸಿದ್ದಾರೆ.

ಭಾರತ ಮತ್ತು ಚೀನಾದ ಮಧ್ಯೆ ವಹಿವಾಟು ಭಾರಿ ಚೇತರಿಕೆ ಕಂಡಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಭಾರತ ಚೀನಾದಿಂದ ಹೆಚ್ಚಿನ ಅಮುದು ವಹಿವಾಟಿನ ಮೇಲೆ ಅವಲಂಬಿತವಾಗಿದೆ. ಉಭಯ ದೇಶಗಳು ದಕ್ಷಿಣ ಏಷ್ಯಾದಲ್ಲಿ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಸಕ್ತ ವರ್ಷಾಂತ್ಯಕ್ಕೆ, ಭಾರತ ಮತ್ತು ಚೀನಾ ದೇಶಗಳು ಕ್ರಮವಾಗಿ ಶೇ.10 ಹಾಗೂ ಶೇ.8.8ರಷ್ಟು ಜಿಡಿಪಿ ದರವನ್ನು ಹೊಂದಲಿವೆ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯ ಉಪಾಧ್ಯಕ್ಷ ಅನೂಪ್ ಸಿಂಗ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಭಾರತ, ಏಷ್ಯಾ ಐಎಂಎಫ್, ಚೀನಾ