ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 35 ಮಿನ್ ಟನ್ ಕಲ್ಲಿದ್ದಲು ಅಮುದು ಅನಿವಾರ್ಯ:ಸೋಲಂಕಿ (Coal | Power companies | Financial | Shortages)
Bookmark and Share Feedback Print
 
ದೇಶದಲ್ಲಿ ಕಲ್ಲಿದ್ದಲು ಉತ್ಪಾದನೆ ಹಾಗೂ ಸರಬರಾಜಿನ ಕೊರತೆಯಿರುವುದರಿಂದ, ಕಲ್ಲಿದ್ದಲು ಬಳಸಿ ವಿದ್ಯುತ್ ಉತ್ಪಾದಿಸುವ ಕಂಪೆನಿಗಳು ಪ್ರಸಕ್ತ ಆರ್ಥಿಕ ಸಾಲಿನಲ್ಲಿ 35 ಮಿಲಿಯನ್ ಟನ್ ಕಲ್ಲಿದ್ದಲು ಅಮುದು ಮಾಡಿಕೊಳ್ಳುವಂತೆ ಸರಕಾರ ಸಲಹೆ ನೀಡಿದೆ.

ಕಲ್ಲಿದ್ದಲು ಕೊರತೆಯನ್ನು ನಿಭಾಯಿಸಲು,ವಿದ್ಯುತ್ ಕಂಪೆನಿಗಳು 35 ಮಿಲಿಯನ್ ಟನ್‌ ಕಲ್ಲಿದ್ದಲು ಅಮುದು ಮಾಡಿಕೊಳ್ಳುವಂತೆ ಸಲಹೆ ನೀಡಲಾಗಿದೆ ಎಂದು ಕೇಂದ್ರದ ವಿದ್ಯುತ್ ಖಾತೆಯ ರಾಜ್ಯ ಸಚಿವ ಭಾರತ್ ಸಿನ್ಹಾ ಸೋಲಂಕಿ ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ದೇಶದ ವಿದ್ಯುತ್ ಕಂಪೆನಿಗಳಿಗೆ ವಾರ್ಷಿಕವಾಗಿ 440 ಮಿಲಿಯನ್ ಟನ್ ಕಲ್ಲಿದ್ದಲು ಅಗತ್ಯವಾಗಿದ್ದು, 35 ಮಿಲಿಯನ್ ಟನ್‌ ಕೊರತೆಯಾಗುತ್ತಿರುವುದರಿಂದ ಅಮುದು ಮಾಡಿಕೊಳ್ಳುವುದು ಅಗತ್ಯವಾಗಿದೆ ಎಂದು ಸೋಲಂಕಿ ಸಮರ್ಥಿಸಿಕೊಂಡಿದ್ದಾರೆ.

ದೇಶದ ಬೃಹತ್ ವಿದ್ಯುತ್ ಉತ್ಪಾದಕ ಕಂಪೆನಿಯಾದ ಎನ್‌ಟಿಪಿಸಿ, ವಾರ್ಷಿಕವಾಗಿ 145-150 ಮಿಲಿಯನ್ ಟನ್ ಕಲ್ಲಿದ್ದಲು ಅಗತ್ಯವಾಗಿದೆ. 14 ಮಿಲಿಯನ್ ಟನ್ ಕಲ್ಲಿದ್ದಲು ಕೊರತೆಯಾಗಲಿದೆ.ಆದ್ದರಿಂದ 14 ಮಿಲಿಯನ್ ಟನ್ ಕಲ್ಲಿದ್ದಲು ಅಮುದು ಮಾಡಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ.

ಸರಕಾರಿ ಸ್ವಾಮ್ಯದ ಕೋಲ್ ಇಂಡಿಯಾ,ಪ್ರಸಕ್ತ ಆರ್ಥಿಕ ವರ್ಷದಲ್ಲಿ ಎನ್‌ಟಿಪಿಸಿ ವಿದ್ಯುತ್ ಕಂಪೆನಿಗಾಗಿ ನಾಲ್ಕು ಮಿಲಿಯನ್ ಟನ್ ಕಲ್ಲಿದ್ದಲು ಅಮುದು ಮಾಡಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ