ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಕಿಂಗ್‌ಫಿಶರ್‌ನಿಂದ ದುಬೈಗೆ ನೂತನ ವಿಮಾನ ಸಂಚಾರ ಆರಂಭ (Kingfisher | New flights | UAE | New Delhi | Mumbai | Vijay Mallya)
Bookmark and Share Feedback Print
 
ದೇಶದ ಖಾಸಗಿ ವಿಮಾನಯಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಕಿಂಗ್‌ಫಿಶರ್ ಏರ್‌ಲೈನ್ಸ್, ದೆಹಲಿ ಮತ್ತು ಮುಂಬೈಯಿಂದ ಯುಎಇಗೆ ಸಂಪರ್ಕ ಕಲ್ಪಿಸುವ ವಿಮಾನ ಸಂಚಾರ ಆರಂಭಿಸಿದ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ದುಬೈಯಿಂದ ದೆಹಲಿ ಹಾಗೂ ದುಬೈಯಿಂದ ಮುಂಬೈಗೆ ನೂತನ ವಿಮಾನ ಸಂಚಾರ ಹಾರಾಟ ಆರಂಭಿಸಿದೆ.ಕಿಂಗ್‌ಫಿಶರ್ ಸಂಸ್ಥೆ ಇಲ್ಲಿಯವರೆಗೆ ದುಬೈ- ಭಾರತದ ಮಧ್ಯೆ ವಾರದ ಅವಧಿಯ 21 ವಿಮಾನಗಳ ಹಾರಾಟ ನಡೆಸುತ್ತಿತ್ತು ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ದುಬೈ-ನವದೆಹಲಿಗೆ ಪ್ರಯಾಣಿಸುವ ವಿಮಾನದಲ್ಲಿ ಪ್ರಯಾಣಿಕರಿಗೆ ಪಂಚತಾರಾ ಸೌಲಭ್ಯಗಳನ್ನು ಅಳವಡಿಸಲಾಗಿದ್ದು, ದುಬೈ- ಮುಂಬೈಗೆ ತೆರಳುವ ವಿಮಾನದಲ್ಲಿ ಕೇವಲ ಕಿಂಗ್‌ಫಿಶರ್ ಕ್ಲಾಸ್‌ ಸೌಲಭ್ಯ ಒದಗಿಸಲಾಗಿದೆ ಎಂದು ಏರ್‌ಲೈನ್ಸ್‌ ಮೂಲಗಳು ತಿಳಿಸಿವೆ.

ದುಬೈಗೆ ಎರಡು ವಿಮಾನ ಸಂಚಾರ ಸೇವೆಯನ್ನು ಘೋಷಿಸಿರುವುದಕ್ಕೆ ತುಂಬಾ ಸಂತೋಷವಾಗಿದೆ ಎಂದು ಏರ್‌ಲೈನ್ಸ್ ಮುಖ್ಯಸ್ಥ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಜಯ್ ಮಲ್ಯ ತಿಳಿಸಿದ್ದಾರೆ.

ದುಬೈಯಿಂದ ಮುಂಬೈ, ನವದೆಹಲಿ ಮತ್ತು ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಏಕೈಕ್ ಏರ್‌ಲೈನ್ಸ್ ಎನ್ನುವ ಖ್ಯಾತಿಯನ್ನು ಕಿಂಗ್‌ಫಿಶರ್ ಪಡೆದಿದೆ ಎಂದು ಏರ್‌ಲೈನ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ