ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಐಡಿಎಫ್‌ಸಿಗೆ 228.11 ಕೋಟಿ ರೂಪಾಯಿ ಆದಾಯ (IDFC | Q4 | Net profit | Income | Stock Exchange)
Bookmark and Share Feedback Print
 
ಇನ್‌ಫ್ರಾಸ್ಟಕ್ಚರ್ ಡೆವಲೆಪ್‌ಮೆಂಟ್ ಫೈನಾನ್ಸ್ ಕಂಪೆನಿ ಲಿಮಿಟೆಡ್ (ಐಡಿಎಫ್‌ಸಿ), 2010ರ ಮಾರ್ಚ್ 31ಕ್ಕೆ ನಾಲ್ಕನೇ ತ್ರೈಮಾಸಿಕ ಅಂತ್ಯಗೊಂಡಂತೆ ನಿವ್ವಳ ಲಾಭದಲ್ಲಿ ಶೇ.96.25 ರಷ್ಟು ಏರಿಕೆಯಾಗಿ 228.11 ಕೋಟಿ ರೂಪಾಯಿಗಳಿಗೆ ತಲುಪಿದೆ.

ಕಂಪೆನಿಯ ಒಟ್ಟು ಆದಾಯ ಮಾರ್ಚ್ 31ಕ್ಕೆ ನಾಲ್ಕನೇ ತ್ರೈಮಾಸಿಕ ಅಂತ್ಯಗೊಂಡಂತೆ 1,023.83ಕೋಟಿ ರೂಪಾಯಿಗಳಿಗೆ ತಲುಪಿದೆ.ಕಳೆದ ವರ್ಷದ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ 956.10 ಕೋಟಿ ರೂಪಾಯಿಗಳಾಗಿತ್ತು ಎಂದು ಮುಂಬೈ ಶೇರುಪೇಟೆಗೆ ಸಲ್ಲಿಸಿದ ಮಾಹಿತಿಯಲ್ಲಿ ಕಂಪೆನಿ ಬಹಿರಂಗಪಡಿಸಿದೆ.

2010ರ ಮಾರ್ಚ್ 31ಕ್ಕೆ ವರ್ಷಾಂತ್ಯಗೊಂಡಂತೆ, ನಿವ್ವಳ ಲಾಭದಲ್ಲಿ ಶೇ.41.67ರಷ್ಟು ಏರಿಕೆಯಾಗಿ 1,062.29 ಕೋಟಿ ರೂಪಾಯಿಗಳಿಗೆ ತಲುಪಿದೆ.

ಕಂಪೆನಿಯ ಅಡಳಿತ ಮಂಡಳಿ ಶೇರುದಾರರ ತಲಾ ಶೇರಿಗೆ,1.50 ರೂಪಾಯಿಗಳ ಡೆವಿಡೆಂಡ್‌ ನೀಡಲು ಉದ್ದೇಶಿಸಿದೆ ಎಂದು ಐಡಿಎಫ್‌ಸಿ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ