ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 3ಜಿ ಸ್ಪೆಕ್ಟ್ರಂ: ದೆಹಲಿಯನ್ನು ಹಿಂದಕ್ಕೆ ತಳ್ಳಿದ ಮುಂಬೈ (3G spectrum | Base price | Auction | Bharti | Vodafone | Idea)
Bookmark and Share Feedback Print
 
3ಜಿ ತರಂಗಾಂತರಗಳ ಹರಾಜು ಬಿಡ್ 14ನೇ ದಿನಕ್ಕೆ ಕಾಲಿರಿಸಿದ್ದು, ಮೂಲದರಕ್ಕಿಂತ ಶೇ.140ರಷ್ಟು ಹೆಚ್ಚಳವಾಗಿ 8382 ಕೋಟಿ ರೂಪಾಯಿಗಳಿಗೆ ತಲುಪಿದೆ.

ಪ್ರತ್ಯೇಕ ವಲಯಗಳ ವಿಭಾಗದಲ್ಲಿ ಮುಂಬೈ 1,264.84 ಕೋಟಿ ರೂಪಾಯಿಗಳಿಗೆ ತಲುಪಿ ಅಗ್ರಸ್ಥಾನವನ್ನು ತಲುಪಿದ್ದು, ಅಗ್ರಸ್ಥಾನದಲ್ಲಿದ್ದ ದೆಹಲಿ 1,209.66 ಕೋಟಿ ರೂಪಾಯಿಗಳಿಗೆ ತಲುಪುವ ಮೂಲಕ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.

ಹರಾಜಿನಲ್ಲಿ ಬಿಡ್ ಸಲ್ಲಿಸಿದ ಒಂಬತ್ತು ಕಂಪೆನಿಗಳಲ್ಲಿ ಭಾರ್ತಿ ಏರ್‌ಟೆಲ್, ವೊಡಾಫೋನ್, ಐಡಿಯಾ ಮತ್ತು ಆರ್‌ಕಾಂ ಸೇರಿದಂತೆ ಇತರ ಕಂಪೆನಿಗಳು ಹಣಾಹಣಿ ನಡೆಸುತ್ತಿವೆ 3ಜಿ ಹರಾಜಿನಿಂದ ಕೇಂದ್ರ ಸರಕಾರಕ್ಕೆ 43.895 ಕೋಟಿ ರೂಪಾಯಿಗಳ ಆದಾಯವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರದ ಟೆಲಿಕಾಂ ಖಾತೆ ಸಚಿವ ಎ.ರಾಜಾ ಮಾತನಾಡಿ, 3ಜಿ ತರಂಗಾಂತಗಳ ಹರಾಜಿನಿಂದ ಅಂದಾಜು 45 ಸಾವಿರ ಕೋಟಿ ರೂಪಾಯಿಗಳ ಆದಾಯವಾಗಲಿದೆ ಎಂದು ತಿಳಿಸಿದ್ದಾರೆ.

ಮುಂಬೈ ಮತ್ತು ದೆಹಲಿಯ ನಂತರ ಮಹಾರಾಷ್ಟ್ರ 823.77 ಕೋಟಿ ರೂಪಾಯಿಗಳಿಗೆ ತಲುಪಿ ಮೂರನೇ ಸ್ಥಾನದಲ್ಲಿದೆ.ತಮಿಳುನಾಡು 769.45 ಕೋಟಿ ರೂಪಾಯಿಗಳಿಗೆ ತಲುಪಿ ನಾಲ್ಕನೇ ಸ್ಥಾನದಲ್ಲಿದೆ.
ಸಂಬಂಧಿತ ಮಾಹಿತಿ ಹುಡುಕಿ