ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಮಾರ್ಚ್‌ನಲ್ಲಿ 20 ಮಿನ್‌ ನೂತನ ಮೊಬೈಲ್ ಗ್ರಾಹಕರ ಸೇರ್ಪಡೆ (Mobile users | TRAI | Customers | Wireless | Wireline | Tariffs)
Bookmark and Share Feedback Print
 
ಪ್ರಸಕ್ತ ವರ್ಷದ ಮಾರ್ಚ್ ತಿಂಗಳ ಅವಧಿಯಲ್ಲಿ 20 ಮಿಲಿಯನ್ ನೂತನ ಮೊಬೈಲ್ ಗ್ರಾಹಕರನ್ನು ಸೇರ್ಪಡೆಗೊಳಿಸುವುದರೊಂದಿಗೆ, ದೇಶದ ಒಟ್ಟು ಮೊಬೈಲ್ ಗ್ರಾಹಕರ ಸಂಖ್ಯೆ 584.32 ಮಿಲಿಯನ್‌ಗಳಿಗೆ ತಲುಪಿದೆ ಎಂದು ಟೆಲಿಕಾಂ ರೆಗ್ಯೂಲೇಟರಿ ಅಥಾರಿಟಿ ಆಫ್ ಇಂಡಿಯಾ ಮೂಲಗಳು ತಿಳಿಸಿವೆ.

ಫೆಬ್ರವರಿ ತಿಂಗಳ ಅವಧಿಯಲ್ಲಿ 564.02 ಮಿಲಿಯನ್ ಮೊಬೈಲ್ ಗ್ರಾಹಕರನ್ನು ಹೊಂದಲಾಗಿತ್ತು, ಮಾರ್ಚ್ ತಿಂಗಳ ಅವಧಿಯಲ್ಲಿ ಮೊಬೈಲ್ ಗ್ರಾಹಕರ ಸಂಖ್ಯೆಯಲ್ಲಿ ಶೇ.3.6ರಷ್ಟು ಹೆಚ್ಚಳವಾಗಿದೆ ಎಂದು ಟ್ರಾಯ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ದೇಶದ ಒಟ್ಟು ಟೆಲಿಫೋನ್ ಬಳಕೆದಾರರ (ಮೊಬೈಲ್ ಮತ್ತು ಸ್ಥಿರ ) ಸಂಖ್ಯೆ 2010ರ ಮಾರ್ಚ್ ಅಂತ್ಯಕ್ಕೆ 621.28 ಮಿಲಿಯನ್‌ಗೆ ತಲುಪಿದೆ.ಫೆಬ್ರವರಿ ತಿಂಗಳ ಅವಧಿಯಲ್ಲಿ ಒಟ್ಟು ಬಳಕೆದಾರರ ಸಂಖ್ಯೆ 600.98 ಮಿಲಿಯನ್‌‌ಗಳಾಗಿತ್ತು ಎಂದು ಟ್ರಾಯ್ ವಿವರಣೆ ನೀಡಿದೆ.

ಟೆಲಿಕಾಂ ಕಂಪೆನಿಗಳು ದರಗಳಲ್ಲಿ ಕಡಿತ ಹಾಗೂ ನೂತನ ಟೆಲಿಕಾಂ ಕಂಪೆನಿಗಳಿಂದ ಹಲವು ಕಂಪೆನಿಗಳಿಂದ ಕಡಿಮೆ ದರದ ಯೋಜನೆಗಳಿಂದಾಗಿ ಒಟ್ಟು ಟೆಲಿಕಾಂ ಗ್ರಾಹಕರ ಸಂಖ್ಯೆ ಮಾರ್ಚ್ ತಿಂಗಳ ಅವಧಿಯಲ್ಲಿ ಶೇ.3.38ರಷ್ಟು ಏರಿಕೆ ಕಂಡಿದೆ.

ಮೊಬೈಲ್ ಕ್ಷೇತ್ರದಲ್ಲಿ ವೋಡಾಫೋನ್ ಟೆಲಿಕಾಂ ಕಂಪೆನಿ ಹೆಚ್ಚಿನ ನೂತನ ಗ್ರಾಹಕರನ್ನು ಸೆಳೆದುಕೊಂಡಿದ್ದು, ನಂತರದ ಸ್ಥಾನವನ್ನು ರಿಲಯನ್ಸ್ ಕಮ್ಯೂನಿಕೇಶನ್ಸ್ ಮತ್ತು ಭಾರ್ತಿ ಏರ್‌ಟೆಲ್ ಸಂಸ್ಥೆ ಸ್ಥಾನಪಡೆದಿವೆ ಎಂದು ಟ್ರಾಯ್ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ