ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಎಸ್‌ಬಿಐ ಲೈಫ್ ಇನ್‌ಶ್ಯೂರೆನ್ಸ್‌ಗೆ 276 ಕೋಟಿ ನಿವ್ವಳ ಲಾಭ (SBI Life Insurance | Financial year | GWP | AUM | Life insurance)
Bookmark and Share Feedback Print
 
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಲೈಫ್ ಇನ್‌ಶ್ಯೂರೆನ್ಸ್, 2010ರ ಆರ್ಥಿಕ ವರ್ಷಾಂತ್ಯಕ್ಕೆ 276 ಕೋಟಿ ರೂಪಾಯಿ ನಿವ್ವಳ ಲಾಭಗಳಿಸಿದೆ ಎಂದು ಮೂಲಗಳು ತಿಳಿಸಿವೆ.

ಎಸ್‌ಬಿಐ ಲೈಫ್ ಇನ್‌ಶ್ಯೂರೆನ್ಸ್, 2009-10ರ ಅವಧಿಯಲ್ಲಿ ಶೇ.40ರಷ್ಟು ಏರಿಕೆ ಕಂಡು 10 ಸಾವಿರ ಕೋಟಿ ರೂಪಾಯಿಗಳ ವಿಮೆಯನ್ನು ಸಂಗ್ರಹಿಸಲಾಗಿದೆ ಎಂದು ಹೊರಡಿಸಿದ ಪಕಟಣೆಯಲ್ಲಿ ತಿಳಿಸಿದೆ.

ಎಸ್‌ಬಿಐ ಲೈಫ್ ಇನ್‌ಶ್ಯೂರೆನ್ಸ್‌ನ ಅಸೆಟ್ ಅಂಡರ್ ಮ್ಯಾನೇಜ್‌ಮೆಂಟ್‌ನಲ್ಲಿ ಶೇ.96 ರಷ್ಟು ಹೆಚ್ಚಳವಾಗಿ 28,551 ಕೋಟಿ ರೂಪಾಯಿಗಳಿಗೆ ತಲುಪಿದೆ. ವಾರ್ಷಿಕ ಪ್ರೀಮಿಯಂ ಸಂಗ್ರಹದಲ್ಲಿ ಶೇ.37ರಷ್ಟು ಏರಿಕೆಯಾಗಿ 6,358 ಕೋಟಿ ರೂಪಾಯಿಗಳಿಗೆ ತಲುಪಿದೆ.

1ಸಾವಿರ ಕೋಟಿ ರೂಪಾಯಿ ಶೇರು ಬಂಡವಾಳವನ್ನು ಹೊಂದುವ ಮೂಲಕ , ಎಸ್‌ಬಿಐ ಲೈಫ್ ಇನ್‌ಶ್ಯೂರೆನ್ಸ್ ದೇಶದ ಪ್ರಮುಖ ವಿಮಾನ ಕಂಪೆನಿಗಳಲ್ಲಿ ಸ್ಥಾನಪಡೆದಿದೆ ಎಂದು ಕಂಪೆನಿ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ