ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಭಾರ್ತಿ ಏರ್‌ಟೆಲ್ ನಿವ್ವಳ ಆದಾಯದಲ್ಲಿ ಶೇ.8ರಷ್ಟು ಕುಸಿತ (Bharti Airtel | Q4 | Net income | Telecom company | Stock Exchange)
Bookmark and Share Feedback Print
 
ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಅಗ್ರಸ್ಥಾನದಲ್ಲಿರುವ ಟೆಲಿಕಾಂ ಕಂಪೆನಿ ಭಾರ್ತಿ ಏರ್‌ಟೆಲ್, 2010ರ ಮಾರ್ಚ್ 31ಕ್ಕೆ ಅಂತ್ಯಗೊಂಡಂತೆ ಕ್ರೂಢೀಕೃತ ನಿವ್ವಳ ಆದಾಯದಲ್ಲಿ ಶೇ.8ರಷ್ಟು ಕುಸಿತವಾಗಿ 2,055 ಕೋಟಿ ರೂಪಾಯಿಗಳಿಗೆ ತಲುಪಿದೆ.

2009-09ರ ಮಾರ್ಚ್ ತಿಂಗಳಿಗೆ ಅಂತ್ಯಗೊಂಡಂತೆ 2,239 ಕೋಟಿ ರೂಪಾಯಿ ನಿವ್ವಳ ಆದಾಯವಾಗಿತ್ತು ಎಂದು ಭಾರ್ತಿ ಏರ್‌ಟೆಲ್ ಕಂಪೆನಿ ಮುಂಬೈ ಶೇರುಪೇಟೆಗೆ ಸಲ್ಲಿಸಿದ ಮಾಹಿತಿಯಲ್ಲಿ ಬಹಿರಂಗಪಡಿಸಿದೆ.

ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ, ಕಂಪೆನಿಯ ನಿವ್ವಳ ಆದಾಯ ಮೊದಲ ಬಾರಿಗೆ 10,000 ಕೋಟಿ ರೂಪಾಯಿಗಳನ್ನು ತಲುಪಿದೆ ಎಂದು ಮುಂಬೈ ಶೇರುಪೇಟೆಗೆ ಸಲ್ಲಿಸಿದ ವಿವರಣೆಯಲ್ಲಿ ಬಹಿರಂಗಪಡಿಸಲಾಗಿದೆ.

2009-10ರ ಮಾರ್ಚ್ 31ಕ್ಕೆ ತ್ರೈಮಾಸಿಕ ಅಂತ್ಯಗೊಂಡಂತೆ ಒಟ್ಟು ಆದಾಯದಲ್ಲಿ ಶೇ.2ರಷ್ಟು ಹೆಚ್ಚಳವಾಗಿ 10,056 ಕೋಟಿ ರೂಪಾಯಿಗಳಿಗೆ ತಲುಪಿದೆ. ಕಳೆದ ವರ್ಷದ ಅವಧಿಯಲ್ಲಿ ಒಟ್ಟು ಆದಾಯ 9,825 ಕೋಟಿ ರೂಪಾಯಿಗಳಾಗಿತ್ತು.

ಇತರ ಟೆಲಿಕಾಂ ಕಂಪೆನಿಗಳ ಭಾರಿ ಸ್ಪರ್ಧೆಯ ಮಧ್ಯೆಯು ಭಾರ್ತಿ ಏರ್‌ಟೆಲ್ ಕಂಪೆನಿ, ಅಗ್ರಸ್ಥಾನದಲ್ಲಿದೆ ಎಂದು ಭಾರ್ತಿಏರ್‌ಟೆಲ್ ಲಿಮಿಟೆಡ್ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸುನೀಲ್ ಮಿತ್ತಲ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ