ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ವರ್ಷಾಂತ್ಯಕ್ಕೆ 100 ಮಿಲಿಯನ್ ಗ್ರಾಹಕರ ಗುರಿ: ಬ್ಲ್ಯಾಕ್ ಬೆರಿ (BlackBerry | Apple | iPhone | RIM | Customer base | Mobile phone)
Bookmark and Share Feedback Print
 
ಆಪಲ್ ಐಫೋನ್‌ನೊಂದಿಗೆ ಭಾರಿ ಸ್ಪರ್ಧೆಯನ್ನು ಎದುರಿಸುತ್ತಿರುವ ಬ್ಲ್ಯಾಕ್ ಬೆರಿ ತಯಾರಿಕೆ ಸಂಸ್ಥೆ ರಿಸರ್ಚ್ ಇನ್‌ ಮೊಶನ್,ಗ್ರಾಹಕರ ಸಂಖ್ಯೆಯನ್ನು ವರ್ಷಾಂತ್ಯಕ್ಕೆ ದ್ವಿಗುಣಗೊಳಿಸುವ ಗುರಿಯನ್ನು ಹೊಂದಲಾಗಿದೆ ಎಂದು ಹೇಳಿಕೆ ನೀಡಿದೆ.

ಪ್ರಸ್ತುತ ಬ್ಲ್ಯಾಕ್‌ಬೆರಿ ಜಾಗತಿಕ ಮೊಬೈಲ್ ಮಾರುಕಟ್ಟೆಯಲ್ಲಿ ಬಹುತೇಕ ಶೇ.3ರಷ್ಟು ಪಾಲನ್ನು ಹೊಂದಿದ್ದು, 41 ಮಿಲಿಯನ್ ಗ್ರಾಹಕರನ್ನು ತನ್ನತ್ತ ಸೆಳೆದುಕೊಂಡಿದೆ.

ಕಡಿಮೆ ಅವಧಿಯಲ್ಲಿ 41 ಮಿಲಿಯನ್ ಗ್ರಾಹಕರನ್ನು ತಲುಪಿರುವುದು ಉತ್ತಮ ಆರಂಭವಾಗಿದೆ ಎಂದು ರಿಮ್ ಅಧ್ಯಕ್ಷ ಲಾಜರ್ಡಿಸ್ ಸಂತಸ ವ್ಯಕ್ತಪಡಿಸಿದ್ದು, 100 ಮಿಲಿಯನ್ ಗ್ರಾಹಕರನ್ನು ತಲುಪುವುದು ಮುಂದಿನ ಗುರಿಯಾಗಿದೆ ಎಂದು ಹೇಳಿದ್ದಾರೆ.

100 ಮಿಲಿಯನ್ ಗ್ರಾಹಕರನ್ನು ತಲುಪಲು ಬ್ಲ್ಯಾಕ್ ಬೆರಿ 6 ಮಾಡೆಲ್‌ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದ್ದು, ಗ್ರಾಹಕ ಸ್ನೇಹಿ ಮತ್ತು ಗ್ರಾಹಕರು ಗ್ರಾಫಿಕ್ಸ್ ಮತ್ತು ಅನಿಮೇಶನ್ ಸೌಲಭ್ಯ ಪಡೆಯಲಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರಸ್ತುತ, ಬ್ಲ್ಯಾಕ್‌ಬೆರಿ ಜಾಗತಿಕ ಮೊಬೈಲ್ ಮಾರುಕಟ್ಟೆಯಲ್ಲಿ ಶೇ.3ರಷ್ಟು ಪಾಲನ್ನು ಹೊಂದಿದ್ದು, ಆಪಲ್ ಐಫೋನ್ ಶೇ.2ರಷ್ಟು ಮಾರುಕಟ್ಟೆಯ ಪಾಲನ್ನು ಪಡೆದು ಎರಡನೇ ಸ್ಥಾನದಲ್ಲಿದೆ.
ಸಂಬಂಧಿತ ಮಾಹಿತಿ ಹುಡುಕಿ