ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಮುಂಗಾರು ಮಳೆ ನಿಗದಿತ ಅವಧಿಗೆ ಮುಂಚೆ ಅಪ್ಪಳಿಸಲಿದೆ (Monsoon | Rains | Economic growth | Weather condition)
Bookmark and Share Feedback Print
 
ಭಾರತ ಕೃಷಿಕರಿಗೆ ಹಾಗೂ ದೇಶದ ಆರ್ಥಿಕ ವೃದ್ಧಿಗೆ ಅಗತ್ಯವಾದ ಮುಂಗಾರು ಮಳೆ ನಿಗದಿತ ಅವಧಿಗಿಂತ 10 ದಿನ ಮುಂಚಿತವಾಗಿ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆಯ ಮಾಜಿ ನಿರ್ದೇಶಕರು ಹೇಳಿದ್ದಾರೆ.

ಪ್ರಸಕ್ತ ವರ್ಷದ ಮುಂಗಾರು ಮಳೆ ನಿಗದಿತ ಅವಧಿಗಿಂತ ಮುಂಚಿತವಾಗಿ ಮುಂಬರುವ ಎಂಟರಿಂದ ಹತ್ತು ದಿನಗಳೊಳಗಾಗಿ ಕೇರಳ ರಾಜ್ಯಕ್ಕೆ ಬೀಸಲಿದೆ ಎಂದು ಭಾರತದ ಹವಾಮಾನ ಇಲಾಖೆಯ ಮಾಜಿ ನಿರ್ದೇಶಕ ಪಿ.ವಿ.ಜೋಸೆಫ್ ತಿಳಿಸಿದ್ದಾರೆ.

ಬೇ ಆಫ್ ಬೆಂಗಾಲ್‌‌ನಲ್ಲಿ ಮುಂಗಾರು ಮಳೆ ಆರಂಭಕ್ಕೆ 40 ದಿನಗಳ ಮುನ್ನ ತಾಪಮಾನದಲ್ಲಿ ಏರಿಕೆಯಾಗಿ, ನಿಗದಿತ ಅವಧಿಗಿಂತ ಮುಂಚಿತವಾಗಿ ಮುಂಗಾರು ಮಳೆ ಆರಂಭವಾಗುತ್ತದೆ.ಏಪ್ರಿಲ್ ತಿಂಗಳ ಮಧ್ಯಭಾಗದಲ್ಲಿ ಇಂತಹ ಬದಲಾವಣೆಗಳಾದ ಹಿನ್ನೆಲೆಯಲ್ಲಿ ಮುಂಗಾರು ಮಳೆ ನಿಗದಿತ ಅವಧಿಗಿಂತ ಮುಂಚಿತವಾಗಿ ಆರಂಭವಾಗುತ್ತದೆ ಎಂದು ಜೋಸೆಫ್ ಹೇಳಿದ್ದಾರೆ.

ಒಂದು ವೇಳೆ ಈ ಪ್ರಕ್ರಿಯೆ ಮೇ ತಿಂಗಳಲ್ಲಿ ನಡೆದಲ್ಲಿ ಮುಂಗಾರು ವಿಳಂಬವಾಗುವ ಸಂಕೇತಗಳು ಕಂಡುಬರುತ್ತದೆ ಎಂದು ಭಾರತದ ಹವಾಮಾನ ಇಲಾಖೆಯ ಮಾಜಿ ನಿರ್ದೇಶಕ ಪಿ.ವಿ.ಜೋಸೆಫ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ