ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಶೀಘ್ರದಲ್ಲಿ ಅಹಾರ ಹಣದುಬ್ಬರ ದರ ಇಳಿಕೆ: ಮುಖರ್ಜಿ (Pranab Mukherjee | Food inflation | Decline | Finance Bill | Lok Sabha.)
Bookmark and Share Feedback Print
 
ಅಗತ್ಯ ವಸ್ತುಗಳ ದರಗಳು ಇಳಿಕೆಯಾಗಲು ಆರಂಭಿಸಿದ್ದರಿಂದ ಮುಂಬರುವ ತಿಂಗಳುಗಳಲ್ಲಿ ಹಣದುಬ್ಬರ ಇಳಿಕೆಯಾಗಲಿದೆ ಎಂದು ಕೇಂದ್ರ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ.

ಅಹಾರ ದರಗಳು ಇಳಿಕೆಯಾಗುತ್ತಿರುವ ಸಂಕೇತಗಳು ಸಂಪೂರ್ಣವಾಗಿ ಕಂಡುಬರುತ್ತಿವೆ.ಮುಂಬರುವ ಕೆಲ ತಿಂಗಳುಗಳಲ್ಲಿ ಯಾವುದೇ ಅಡ್ಡಿ ಆತಂಕಗಳಿಲ್ಲದೇ ಹಣದುಬ್ಬರ ಇಳಿಕೆಯಾಗುತ್ತದೆ ಎಂದು ಹಣಕಾಸಿ ಮಸೂದೆ ಮಂಡಿಸುವ ಸಂದರ್ಭದಲ್ಲಿ ಲೋಕಸಭೆಗೆ ಸಚಿವ ಮುಖರ್ಜಿ ತಿಳಿಸಿದ್ದಾರೆ.

ಕಳೆದ ಡಿಸೆಂಬರ್ 2009ರಿಂದ ಮಾರ್ಚ್ 2010ರ ವರೆಗೆ ಹಣದುಬ್ಬರದಲ್ಲಿ ಶೇ.20ರಷ್ಟು ಇಳಿಕೆಯಾಗಿ ಶೇ.17.7ಕ್ಕೆ ತಲುಪಿದೆ ಎಂದು ವಿತ್ತಖಾತೆ ಸಚಿವ ಮುಖರ್ಜಿ ಹೇಳಿದ್ದಾರೆ.

ಹಣದುಬ್ಬರ ನಿಯಂತ್ರಣಕ್ಕಾಗಿ ಸರಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಂಡಿದ್ದು 2009ರ ಜೂನ್-ಅಗಸ್ಟ್ ತಿಂಗಳಲ್ಲಿ ಋಣಾತ್ಮಕತೆಯತ್ತ ಸಾಗಿದ್ದ ಹಣದುಬ್ಬರ ದರ 2010ರ ಮಾರ್ಚ್ ಅಂತ್ಯಕ್ಕೆ ಶೇ.9.9ಕ್ಕೆ ಏರಿಕೆ ಕಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ