ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 3ಜಿ ತರಂಗಾಂತರ: ದೆಹಲಿ, ಮುಂಬೈಗೆ ಅಗ್ರಸ್ಥಾನ (Spectrum | 3G auction)
Bookmark and Share Feedback Print
 
ಕೇಂದ್ರದ ಟೆಲಿಕಾಂ ಇಲಾಖೆ 2008ರ ಅವಧಿಯಲ್ಲಿ ದೇಶಾದ್ಯಂತ 2ಜಿ ತರಂಗಾಂತರಗಳನ್ನು ಕೇವಲ 1651 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಲಾಗಿತ್ತು. ಆದರೆ ಪಾರದರ್ಶಕ 3ಜಿ ಹರಾಜಿನಿಂದಾಗಿ ಇದೀಗ ಕೇವಲ ಎರಡು ವೃತ್ತಗಳಿಗೆ 1,645.21 ಕೋಟಿ ರೂಪಾಯಿಗಳ ಬಿಡ್ ಮಾಡಲಾಗಿದೆ.

ಮುಂಬೈ 3ಜಿ ಹರಾಜು ಬಿಡ್ 1329.34 ಕೋಟಿ ರೂಪಾಯಿಗಳಿಗೆ ತಲುಪಿದ್ದು, ಅಗ್ರಸ್ಥಾನದಲ್ಲಿದೆ. ದೆಹಲಿ 1284.04 ಕೋಟಿ ರೂಪಾಯಿಗಳ 3ಜಿ ತರಂಗಾಂತರಗಳ ಬಿಡ್ ಪಡೆಯುವ ಮೂಲಕ ಎರಡನೇ ಸ್ಥಾನದಲ್ಲಿದೆ.

3ಜಿ ತರಂಗಾಂತರಗಳ ಹರಾಜು 15ನೇ ದಿನವಾದ ಮಂಗಳವಾರದ ಬಿಡ್ ಮುಕ್ತಾಯಕ್ಕೆ 8,662 ಕೋಟಿ ರೂಪಾಯಿಗಳಿಗೆ ತಲುಪಿದೆ.ಇದರಿಂದಾಗಿ ಕೇಂದ್ರ ಸರಕಾರ ಮೊದಲು ಅಂದಾಜಿಸಿರುವುದಕ್ಕಿಂತ ನಿವ್ವಳ ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿವೆ.

3ಜಿ ತರಂಗಾಂತರಗಳ ಹರಾಜಿನಿಂದ ಸುಮಾರು 35 ಸಾವಿರ ಕೋಟಿ ರೂಪಾಯಿ ಲಾಭವಾಗಲಿದೆ ಎಂದು ಸರಕಾರ ಅಂದಾಜಿಸಿತ್ತು.ಆದರೆ ಇದೀಗ ಸುಮಾರು 50,000-55,000 ಕೋಟಿ ರೂಪಾಯಿಗಳ ಆದಾಯವಾಗುವ ನಿರೀಕ್ಷೆಯಿದೆ ಎಂದು ಕೇಂದ್ರ ಟೆಲಿಕಾಂ ಖಾತೆ ಸಚಿವ ಎ.ರಾಜಾ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ