ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಎಲ್‌ಐಸಿ ಹೌಸಿಂಗ್ ಫೈನಾನ್ಸ್‌ಗೆ 213 ಕೋಟಿ ರೂ. ಲಾಭ (LIC Housing | Net profit | Q4 | BSE)
Bookmark and Share Feedback Print
 
ಸರಕಾರಿ ಸ್ವಾಮ್ಯದ ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಸಂಸ್ಥೆ, 2010ರ ಮಾರ್ಚ್ 31ಕ್ಕೆ ನಾಲ್ಕನೇ ತ್ರೈಮಾಸಿಕ ಅಂತ್ಯಗೊಂಡಂತೆ ನಿವ್ವಳ ಲಾಭದಲ್ಲಿ ಶೇ.35.51ರಷ್ಟು ಹೆಚ್ಚಳವಾಗಿ 213.51 ಕೋಟಿ ರೂಪಾಯಿಗಳಿಗೆ ತಲುಪಿದೆ.

ಮಾರ್ಚ್ 31ಕ್ಕೆ ನಾಲ್ಕನೇ ತ್ರೈಮಾಸಿಕ ಅಂತ್ಯಗೊಂಡಂತೆ, ಒಟ್ಟು ಆದಾಯ 962.94 ಕೋಟಿ ರೂಪಾಯಿಗಳಿಗೆ ತಲುಪಿದೆ. ಕಳೆದ ವರ್ಷದ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ, 790.47 ಕೋಟಿ ರೂಪಾಯಿಗಳಾಗಿತ್ತು ಎಂದು ಮುಂಬೈ ಶೇರುಪೇಟೆಗೆ ಸಲ್ಲಿಸಿದ ಮಾಹಿತಿಯಲ್ಲಿ ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಬಹಿರಂಗಪಡಿಸಿದೆ.

2010ರ ಮಾರ್ಚ್‌ಗೆ ವರ್ಷಾಂತ್ಯಗೊಂಡಂತೆ, ಕಂಪೆನಿಯ ನಿವ್ವಳ ಲಾಭ 662.17 ಕೋಟಿ ರೂಪಾಯಿಗಳಿಗೆ ತಲುಪಿದೆ. ಕಳೆದ ಆರ್ಥಿಕ ವರ್ಷದ ಅವಧಿಯಲ್ಲಿ 531.62 ಕೋಟಿ ರೂಪಾಯಿಗಳ ಲಾಭವಾಗಿತ್ತು.

ಕಂಪೆನಿಯ ಒಟ್ಟು ಆದಾಯ, ಮಾರ್ಚ್ 2010ರ ಮಾರ್ಚ್ ಅಂತ್ಯಕ್ಕೆ 3,456.24 ಕೋಟಿ ರೂಪಾಯಿಗಳಿಗೆ ತಲುಪಿದೆ. ಕಳೆದ ಆರ್ಥಿಕ ವರ್ಷದ ಅವಧಿಯಲ್ಲಿ 2,880.17 ಕೋಟಿ ರೂಪಾಯಿಗಳಿಗೆ ತಲುಪಿತ್ತು.

ಎಲ್ಐಸಿ ಹೌಸಿಂಗ್ ಫೈನಾನ್ಸ್ ಅಡಳಿತ ಮಂಡಳಿ, ಶೇರುದಾರರ ತಲಾ 15 ರೂಪಾಯಿ ಶೇರಿಗೆ ಶೇ.150ರಷ್ಟು ಡೆವಿಡೆಂಡ್ ಘೋಷಿಸಿದೆ.

ಇಂದಿನ ಶೇರುಪೇಟೆಯಲ್ಲಿ ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಶೇರುಗಳು ಆರಂಭಿಕ ವಹಿವಾಟಿನಲ್ಲಿ ಶೇ.1.13ರಷ್ಟು ಇಳಿಕೆ ಕಂಡು 899 ರೂಪಾಯಿಗಳಿಗೆ ತಲುಪಿದೆ.
ಸಂಬಂಧಿತ ಮಾಹಿತಿ ಹುಡುಕಿ