ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಫಾರೆಕ್ಸ್: ರೂಪಾಯಿ ಮೌಲ್ಯ ಬಲವರ್ಧನೆ (Rupee| Dollar | Forex | Capital inflows | Sensex)
Bookmark and Share Feedback Print
 
ವಿದೇಶಿ ಬಂಡವಾಳದ ಒಳಹರಿವಿನ ಹಿನ್ನೆಲೆಯಲ್ಲಿ ಡಾಲರ್ ಎದುರಿಗೆ ರೂಪಾಯಿ 8 ಪೈಸೆ ಚೇತರಿಸಿಕೊಂಡು 44.56 ರೂಪಾಯಿಗಳಿಗೆ ತಲುಪಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ವಿದೇಶಿ ವಿನಿಮಯ ಮಾರುಕಟ್ಟೆಯ ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ ಡಾಲರ್ ಎದುರಿಗೆ ರೂಪಾಯಿ 20 ಪೈಸೆ ಕುಸಿತ ಕಂಡು 44.64/65 ರೂಪಾಯಿಗಳಿಗೆ ತಲುಪಿತ್ತು. ಆದರೆ ಇಂದಿನ ಆರಂಭಿಕ ವಹಿವಾಟಿನಲ್ಲಿ 8 ಪೈಸೆ ಏರಿಕೆ ಕಂಡು 44.56 ರೂಪಾಯಿಗಳಿಗೆ ತಲುಪಿದೆ.

ದೇಶಿಯ ಮಾರುಕಟ್ಟೆಯಲ್ಲಿ ವಿದೇಶಿ ಬಂಡವಾಳದ ಒಳಹರಿವು ಹೆಚ್ಚಳ ಹಾಗೂ ಬ್ಯಾಂಕ್‌ಗಳಿಂದ ಡಾಲರ್‌ಗಳ ಮಾರಾಟದಿಂದಾಗಿ, ರೂಪಾಯಿ ಮೌಲ್ಯ ಏರಿಕೆಗೆ ಕಾರಣವಾಗಿದೆ ಎಂದು ಫಾರೆಕ್ಸ್ ಮೂಲಗಳು ತಿಳಿಸಿವೆ.

ಏತನ್ಮಧ್ಯೆ, ಮುಂಬೈ ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 98.94 ಪಾಯಿಂಟ್‌ಗಳ ಏರಿಕೆ ಕಂಡು 17,479.02 ಅಂಕಗಳಿಗೆ ತಲುಪಿದೆ.
ಸಂಬಂಧಿತ ಮಾಹಿತಿ ಹುಡುಕಿ