ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಕೇವಲ 700 ರೂ.ಗಳಿಗೆ ವೋಡಾಫೋನ್ ಹ್ಯಾಂಡ್‌ಸೆಟ್ (Vodafone | Mobile phones | Handset | Economical handsets | Customers)
Bookmark and Share Feedback Print
 
PTI
ಕಡಿಮೆ ದರದಲ್ಲಿ ಮೊಬೈಲ್ ಖರೀದಿಸುವ ಗ್ರಾಹಕರಿಗೊಂದು ಸಂತಸದ ಸುದ್ದಿ.ದೇಶದ ಮೊಬೈಲ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ವೋಡಾಫೋನ್ ಸಂಸ್ಥೆ ಅಂತಹ ಗ್ರಾಹಕರಿಗಾಗಿ ಕೇವಲ 700 ರೂಪಾಯಿಗಳ ದರವನ್ನು ಹೊಂದಿರುವ ಮೊಬೈಲ್ ಹ್ಯಾಂಡ್‌ಸೆಟ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.

ಪ್ರಸ್ತುತ ಹಲವು ಕಂಪೆನಿಗಳು 1000 ರೂಪಾಯಿಗಳಿಗಿಂತ ಕಡಿಮೆ ದರವಿರುವ ಮೊಬೈಲ್ ಹ್ಯಾಂಡ್‌ಸೆಟ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸ್ಪರ್ಧೆ ನಡೆಸುತ್ತಿವೆ.ವೋಡಾಫೋನ್ ಕೂಡಾ ಕಡಿಮೆ ದರದ ಮೊಬೈಲ್ ಹ್ಯಾಂಡ್‌ಸೆಟ್‌ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಘೋಷಿಸಿದೆ.

ವೋಡಾಫೋನ್ ಮೊಬೈಲ್ ಸಂಸ್ಥೆ, ದೇಶದ ಗ್ರಾಮೀಣ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡು 700 ರೂಪಾಯಿಗಳ ದರದ ಮೊಬೈಲ್‌ ಮಾರುಕಟ್ಟೆಯನ್ನು ಬಿಡುಗಡೆ ಮಾಡುತ್ತಿದೆ. ಈಗಾಗಲೇ ನೋಕಿಯಾ,ಫ್ಲೈ, ಸ್ಪೈಸ್, ಮೈಕ್ರೋಮ್ಯಾಕ್ಸ್ ಮತ್ತು ಇತರ ಕಂಪೆನಿಗಳು 1000 ರೂಪಾಯಿಗಳಿಗಿಂತ ಕಡಿಮೆ ದರದ ಮೊಬೈಲ್‌ ಹ್ಯಾಂಡ್‌ಸೆಟ್ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ. ಆದರೆ ವೋಡಾಫೋನ್ ಉಳಿದ ಕಂಪೆನಿಗಳನ್ನು ಹಿಂದಕ್ಕೆ ತಳ್ಳಿ ಅಗ್ರಸ್ಥಾನದಲ್ಲಿದೆ.

ದೇಶದ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ 700 ರೂಪಾಯಿ ದರದ ಮೊಬೈಲ್ ಹ್ಯಾಂಡ್‌ಸೆಟ್ ಮಾರುಕಟ್ಟೆಗೆ ಶೀಘ್ರದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದೆ.ಕಡಿಮೆ ದರದ ಹ್ಯಾಂಡ್‌ಸೆಟ್‌ಗಳ ಮಾರಾಟದಿಂದ ಹೆಚ್ಚಿನ ಲಾಭವಾಗುವ ನಿರೀಕ್ಷೆಗಳಿವೆ ಎಂದು ಕಂಪೆನಿಯ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ