ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಶೇ.16.61ಕ್ಕೆ ಇಳಿಕೆಯಾದ ಹಣದುಬ್ಬರ ದರ (Food price inflation | Fuel price inflation | Price Index | RBI | Pranab Mukherjee)
Bookmark and Share Feedback Print
 
PTI
ಅಹಾರ ಹಣದುಬ್ಬರ ದರ ಏಪ್ರಿಲ್ ಮಧ್ಯಭಾಗದಲ್ಲಿ ಇಳಿಕೆಯಾಗಿದೆ. ಆದರೆ ಸಗಟು ಸೂಚ್ಯಂಕ ದರದಲ್ಲಿ ಇಂಧನ ಹಣದುಬ್ಬರ ದರ ಏರಿಕೆಯಾಗುತ್ತಿದ್ದು, ಮತ್ತಷ್ಟು ಕಠಿಣ ಆರ್ಥಿಕ ನಿಯಮಗಳನ್ನು ಜಾರಿಗೆ ತರುವುದು ಅಗತ್ಯವಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿಕೆ ನೀಡಿದೆ.

ಅಹಾರ ಹಣದುಬ್ಬರ ದರ ಕಳೆದ ವಾರ ಶೇ.17.65ರಷ್ಟು ಏರಿಕೆ ಕಂಡಿದ್ದು, ಏಪ್ರಿಲ್ 17ಕ್ಕೆ ವಾರಂತ್ಯಗೊಂಡಂತೆ ಪ್ರಸಕ್ತ ವಾರದಲ್ಲಿ ಶೇ.16.61ಕ್ಕೆ ಇಳಿಕೆಯಾಗಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ.

ಇಂಧನ ದರ ಸೂಚ್ಯಂಕ ಕಳೆದ ವಾರ ಶೇ.12.45ರಷ್ಟಿದ್ದು, ಏಪ್ರಿಲ್ 17ಕ್ಕೆ ವಾರಂತ್ಯಗೊಂಡಂತೆ ಶೇ.12.69ಕ್ಕೆ ಏರಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ವಾರ್ಷಿಕ ಹಣದುಬ್ಬರ ದರ ಪ್ರಕಟವಾದ ನಂತರ ಮಾತನಾಡಿದ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ,ಉತ್ತಮ ಮುಂಗಾರು ಮಳೆಯಾಗುವ ನಿರೀಕ್ಷೆಯಲ್ಲಿ, ಅಹಾರ ಹಣದುಬ್ಬರ ಇಳಿಕೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಹಣದುಬ್ಬರ ಮತ್ತಷ್ಟು ಇಳಿಕೆಯಾಗುವ ಸಂಕೇತಗಳು ಕಂಡುಬರುತ್ತಿವೆ ಎಂದು ತಿಳಿಸಿದ್ದಾರೆ.

ಅಹಾರ ಮತ್ತು ಇಂಧನ ದರಗಳ ಇಳಿಕೆಯ ನಂತರವೂ ಆರ್‌ಬಿಐ ಹಣದುಬ್ಬರ ರೆಪೋ ದರಗಳನ್ನು ಹಿಂಪಡೆಯುತ್ತದೆ ಎಂದು ನಾನು ಭಾವಿಸಿಲ್ಲ. ಯಾಕೆಂದರೆ ಉತ್ಪಾದನಾ ಕ್ಷೇತ್ರದ ಹಣದುಬ್ಬರ ನಿರಂತರವಾಗಿ ಏರಿಕೆ ಕಾಣುತ್ತಿದೆ ಎಂದು ಆರ್ಥಿಕ ತಜ್ಞ ಎನ್‌ಆರ್ ಭಾನುಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

ರಿಸರ್ವ್ ಬ್ಯಾಂಕ್, ಏಪ್ರಿಲ್ ತಿಂಗಳಲ್ಲಿ ಎರಡನೇ ಬಾರಿಗೆ ರೆಪೋ ದರಗಳನ್ನು ಹೆಚ್ಚಿಸಿದ್ದರೂ ಸಗಟು ಸೂಚ್ಯಂಕ ಹಣದುಬ್ಬರ ದರ, ಮಾರ್ಚ್ ತಿಂಗಳ ಅವಧಿಯಲ್ಲಿ 17 ತಿಂಗಳ ಗರಿಷ್ಠ ಏರಿಕೆ ಕಂಡು ಶೇ.9.9ಕ್ಕೆ ತಲುಪಿದೆ.
ಸಂಬಂಧಿತ ಮಾಹಿತಿ ಹುಡುಕಿ