ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಸರೆಗಮದಿಂದ 50 ಸಾವಿರ ಹಾಡುಗಳ ಡೌನ್‌ಲೋಡ್ ಸೌಲಭ್ಯ (Saregama | Music lovers | South Indian pop | Songs | Download)
Bookmark and Share Feedback Print
 
ಸಂಗೀತ ಪ್ರಿಯರಿಗೊಂದು ಸಂತಸದ ಸುದ್ದಿ. ಸೌಥ್ ಇಂಡಿಯನ್ ಪಾಪ್‌ ಮೂಲಕ 50 ಸಾವಿರ ಬಾಲಿವುಡ್ ಹಾಡುಗಳನ್ನು ಮೊಬೈಲ್‌ ಫೋನ್‌ಗಳಿಗೆ ಉಚಿತವಾಗಿ ಡೌನಲೋಡ್ ಮಾಡಿಕೊಳ್ಳಬಹುದಾಗಿದೆ.

ಸೌಥ್ ಇಂಡಿಯನ್ ಪಾಪ್ ಮೂಲಕ ಹಿಂದಿ, ತಮಿಳು, ಮರಾಠಿ, ಗುಜರಾತಿ ಮತ್ತು ಬಂಗಾಳಿ ಹಾಡುಗಳು ಸೇರಿದಂತೆ 10 ಭಾಷೆಯ ಹಾಡುಗಳನ್ನು ಡೌನ್‌ಲೋಡ್ ಮಾಡಬಹುದಾಗಿದೆ ಎಂದು ಸರೆಗಮ ಇಂಡಿಯಾ ಲಿಮಿಟೆಡ್ ತಿಳಿಸಿದೆ.

ಈ ಸೇವೆಯನ್ನು ಆರಂಭಿಸಿದ ನಂತರ wap.saregama.comಗೆ ಪ್ರತಿನಿತ್ಯ ಒಂದು ಲಕ್ಷಕ್ಕಿಂತ ಹೆಚ್ಚು ಸಂಗೀತ ಪ್ರಿಯರು ವೆಬ್‌ಸೈಟ್‌ಗೆ ಭೇಟಿ ನೀಡುತ್ತಿದ್ದಾರೆ ಎಂದು ಸಂಸ್ಥೆಯ ಮುಖ್ಯ ವ್ಯವಸ್ಥಾಪಕ ಪಿ,ಕೆ,ಪ್ರಸನ್ನನ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸರೆಗಮ ಇಂಡಿಯಾ ಲಿಮಿಟೆಡ್ ಕಂಪೆನಿಯನ್ನು ಈ ಮೊದಲು ಗ್ರಾಮೋಫೋನ್ ಕಂಪೆನಿ ಆಫ್ ಇಂಡಿಯಾ ಲಿಮಿಟೆಡ್ ಎಂದು ಕರೆಯಲಾಗುತ್ತಿತ್ತು.ಕಂಪೆನಿಯಲ್ಲಿ 2500 ಗಂಟೆಗಳ 300000 ಹಾಡುಗಳ ಸಂಗ್ರಹವಿದೆ.
ಸಂಬಂಧಿತ ಮಾಹಿತಿ ಹುಡುಕಿ