ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಅರ್ಸೆಲರ್ ಮಿತ್ತಲ್‌‌ಗೆ 679 ಮಿನ್ ಡಾಲರ್ ಆದಾಯ (ArcelorMittal | Steel demand | Lakshmi N Mittal | Net income)
Bookmark and Share Feedback Print
 
ಜಾಗತಿಕ ಪ್ರಮುಖ ಉಕ್ಕು ಉತ್ಪಾದಕ ಸಂಸ್ಥೆಯಾದ ಅರ್ಸೆಲರ್ ಮಿತ್ತಲ್, ಜಾಗತಿಕವಾಗಿ ಉಕ್ಕು ಬೇಡಿಕೆಯಲ್ಲಿ ಹೆಚ್ಚಳವಾಗಿದ್ದರಿಂದ ಮೊದಲ ತ್ರೈಮಾಸಿಕ ಅವಧಿಯಲ್ಲಿ 679 ಮಿಲಿಯನ್ ಡಾಲರ್‌ಗಳಷ್ಟು ನಿವ್ವಳ ಆದಾಯ ಗಳಿಸಿದೆ.

ಕಳೆದ ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ,ಕಂಪೆನಿ 1.06 ಬಿಲಿಯನ್ ಡಾಲರ್‌ಗಳ ನಿವ್ವಳ ನಷ್ಟ ಅನುಭವಿಸಿತ್ತು ಎಂದು ಜಗತ್ತಿನ ಬೃಹತ್ ಉಕ್ಕು ಉತ್ಪಾದಕ ಕಂಪೆನಿಯಾದ ಅರ್ಸೆಲರ್‌ ಮಿತ್ತಲ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಜಾಗತಿಕ ಆರ್ಥಿಕತೆ ಸುಸ್ಥಿತಿಗೆ ಮರಳುತ್ತಿರುವುದರಿಂದ ಉಕ್ಕು ಬೇಡಿಕೆಯಲ್ಲಿ ಹೆಚ್ಚಳವಾಗಿದೆ.ಪ್ರಸಕ್ತ ವರ್ಷದ ಅವಧಿಯಲ್ಲಿ ವಹಿವಾಟಿನಲ್ಲಿ ಸಂಪೂರ್ಣ ಚೇತರಿಕೆಯಾಗುವ ಸಂಕೇತಗಳು ಕಂಜುಬರುತ್ತಿವೆ.ಎರಡನೇ ತ್ರೈಮಾಸಿಕ ಅವಧಿಯಲ್ಲಿ ಮತ್ತಷ್ಟು ಲಾಭವಾಗುವ ನಿರೀಕ್ಷೆಗಳಿವೆ ಎಂದು ಅರ್ಸೆಲರ್ ಮಿತ್ತಲ್ ಕಂಪೆನಿಯ ಮುಖ್ಯಸ್ಥ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿ ಎನ್.ಮಿತ್ತಲ್ ತಿಳಿಸಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಸಿದಲ್ಲಿ 2010ರ ಮಾರ್ಚ್ 31ಕ್ಕೆ ಅಂತ್ಯಗೊಂಡಂತೆ, ಮೊದಲ ತ್ರೈಮಾಸಿಕ ಅವಧಿಯ ಉಕ್ಕು ಮಾರಾಟದಲ್ಲಿ ಶೇ.23ರಷ್ಟು ಹೆಚ್ಚಳವಾಗಿ 18.65 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ.

ಅರ್ಸೆಲರ್ ಮಿತ್ತಲ್ ಕಂಪೆನಿಯ ಅಡಳಿತ ಮಂಡಳಿ, ಜನೆವರಿ-ಮಾರ್ಚ್ ತಿಂಗಳ ಅವಧಿಯಲ್ಲಿ, ಕಂಪೆನಿಯ ಶೇರುದಾರರಿಗೆ 282 ಮಿಲಿಯನ್ ಡಾಲರ್‌ಗಳ ಡೆವಿಡೆಂಡ್ ಘೋಷಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ