ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಮಾರುತಿಯಿಂದ ಪರಿಷ್ಕರಿಸಿದ ಅಲ್ಟೊ ಕಾರು ಮಾರುಕಟ್ಟೆಗೆ (Maruti Suzuki | Alto | Wagon R)
Bookmark and Share Feedback Print
 
ದೇಶದ ಕಾರು ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಝುಕಿ, ಪರಿಷ್ಕರಿಸಿದ ನೂತನ ಅಲ್ಟೊ ಕಾರುಗಳನ್ನು ಕಡಿಮೆ ದರದಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸಲು ನಿರ್ಧರಿಸಿದೆ. ಪ್ರತಿ ತಿಂಗಳು 20,000 ಅಲ್ಟೋ ಕಾರುಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಪರಿಷ್ಕರಿಸಿದ ನೂತನ ಅಲ್ಟೊ ಕಾರುಗಳನ್ನು ಕಡಿಮೆ ದರದಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸುವುದರಿಂದ, ಇತರ ಕಂಪೆನಿಗಳಿಗೆ ಸ್ಪರ್ಧೆಯನ್ನು ನೀಡುವುದರೊಂದಿಗೆ ಇತ್ತೀಚೆಗೆ ಸ್ಥಗಿತಗೊಳಿಸಲಾದ ಮಾರುತಿ 800 ಮಾಡೆಲ್‌ ಕಾರಿನ ಸ್ಥಾನವನ್ನು ತುಂಬಲಿದೆ.ಪರಿಷ್ಕರಿಸಿದ ಅಲ್ಟೊ ಕಾರಿಗೆ 1ಲೀಟರ್ ಕೆ ಸೀರಿಸ್ ಇಂಜಿನ್ ಅಳವಡಿಸಲಾಗಿದ್ದು, 2 ಲಕ್ಷ ರೂಪಾಯಿಗಳವರೆಗೆ ದರ ನಿಗದಿಪಡಿಸಲಾಗುವುದು ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.

ಮಾರುತಿ 800 ಮಾಡೆಲ್‌ ಕಾರಿಗಿಂತ ಅಲ್ಟೋ ದರ ಹೆಚ್ಚು ದುಬಾರಿಯಾಗಿಲ್ಲ.ಗ್ರಾಹಕರಿಗೆ ಕಡಿಮೆ ದರದಲ್ಲಿ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವುದು ನಮ್ಮ ಗುರಿಯಾಗಿದೆ ಎಂದು ಮಾರುತಿ ಕಂಪೆನಿಯ ಮುಖ್ಯಸ್ಥ ಆರ್‌.ಸಿ. ಭಾರ್ಗವಾ ತಿಳಿಸಿದ್ದಾರೆ.

ಪರಿಷ್ಕರಿಸಿದ ನೂತನ ಅಲ್ಟೋ ಕಾರು ಮುಂಬರುವ ಕೆಲ ತಿಂಗಳುಗಳಲ್ಲಿ ಮಾರುಕಟ್ಟೆಗಳಲ್ಲಿ ದೊರೆಯಲಿದ್ದು, ಆದರೆ ವಿನ್ಯಾಸದ ಬದಲಾವಣೆಯಲ್ಲಿ ಹೆಚ್ಚಿನ ನಿರೀಕ್ಷೆ ಬೇಡ. ಭರ್ಜರಿ ಯಶಸ್ವಿಯಾದ ಅಲ್ಟೊ ವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆ ತರಲು ಕಂಪೆನಿ ಬಯಸುವುದಿಲ್ಲ ಎಂದು ಭಾರ್ಗವಾ ಹೇಳಿದ್ದಾರೆ.

ವಾಗನ್‌ಆರ್ ಮಾಡೆಲ್ ಕಾರು ಮೇಲ್ದರ್ಜೇಗೇರಿಸಲು ಕಂಪೆನಿ 290 ಕೋಟಿ ರೂಪಾಯಿಗಳ ಹೂಡಿಕೆ ಮಾಡಿದ್ದು, ಕಾರಿನ ಇಂಜಿನ್ ಸೇರಿದಂತೆ ಕೆಲ ಬದಲಾವಣೆಗಳೊಂದಿಗೆ ಮಾಸಾಂತ್ಯಕ್ಕೆ ಮಾರುಕಟ್ಟೆಗಳಲ್ಲಿ ಲಭ್ಯವಾಗಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮಾರುತಿ ಸುಝುಕಿ, ಅಲ್ಟೊ, ವಾಗನಾರ್