ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಚಿನ್ನದ ದರ: ಪ್ರತಿ 10 ಗ್ರಾಂಗೆ 17,240 ರೂ. (bullion market| Gold prices)
Bookmark and Share Feedback Print
 
PTI
ಚಿನ್ನದ ಸಂಗ್ರಹಕಾರರು ಹಾಗೂ ಆಭರಣಗಳ ತಯಾರಕರಿಂದ ಚಿನ್ನದ ಬೇಡಿಕೆಯಲ್ಲಿ ಹೆಚ್ಚಳವಾಗಿದ್ದರಿಂದ, ಚಿನ್ನದ ದರ ಪ್ರತಿ 10ಗ್ರಾಂಗೆ 50 ರೂಪಾಯಿಗಳ ದರ ಏರಿಕೆಯಾಗಿ 17,240 ರೂಪಾಯಿಗಳಿಗೆ ತಲುಪಿದೆ.

ಕೈಗಾರಿಕೋದ್ಯಮಗಳಿಂದ ಬೇಡಿಕೆಯಲ್ಲಿ ಏರಿಕೆಯಾಗಿದ್ದರಿಂದ, ಬೆಳ್ಳಿಯ ದರದಲ್ಲಿ ಕೂಡಾ ಪ್ರತಿ ಕೆಜಿಗೆ 50 ರೂಪಾಯಿಗಳಷ್ಟು ಹೆಚ್ಚಳವಾಗಿ 28,050 ರೂಪಾಯಿಗಳಿಗೆ ತಲುಪಿದೆ.

ಚಿನ್ನದ ಸಂಗ್ರಹಕಾರರು ಹಾಗೂ ಆಭರಣಗಳ ತಯಾರಕರಿಂದ ಚಿನ್ನದ ಬೇಡಿಕೆಯಲ್ಲಿ ಹೆಚ್ಚಳ ಹಾಗೂ ಸಾಗರೋತ್ತರ ಮಾರುಕಟ್ಟೆಗಳಲ್ಲಿ ಚಿನ್ನದ ಖರೀದಿಯಲ್ಲಿ ಏರಿಕೆಯಾಗಿದ್ದರಿಂದ, ನಿನ್ನೆಯ ವಹಿವಾಟಿನ ಮುಕ್ತಾಯಕ್ಕೆ 200 ರೂಪಾಯಿಗಳಷ್ಟು ದರ ಏರಿಕೆಯಾಗಿತ್ತು ಎಂದು ಚಿನಿವಾರಪೇಟೆಯ ವರ್ತಕರು ತಿಳಿಸಿದ್ದಾರೆ.

ಸಾಗರೋತ್ತರ ಮಾರುಕಟ್ಟೆಗಳಲ್ಲಿ ಶೇರುಪೇಟೆಗಳ ಅತಂತ್ರ ಸ್ಥಿತಿಯಿಂದಾಗಿ, ಹೂಡಿಕೆದಾರರು ಸುರಕ್ಷಿತ ಠೇವಣಿಯಾಗಿ ಚಿನ್ನವನ್ನು ಪರಿಗಣಿಸಿರುವುದರಿಂದ, ಚಿನ್ನದ ದರದಲ್ಲಿ ಪ್ರತಿ ಔನ್ಸ್‌ಗೆ 1.90 ಡಾಲರ್‌ಗಳಷ್ಟು ಏರಿಕೆಯಾಗಿ 1,167.60 ಡಾಲರ್‌ಗಳಿಗೆ ತಲುಪಿದೆ.

ಸ್ಟ್ಯಾಂಡರ್ಡ್ ಚಿನ್ನ ಮತ್ತು ಆಭರಣ ಚಿನ್ನದ ದರಗಳಲ್ಲಿ ತಲಾ 50 ರೂಪಾಯಿಗಳಷ್ಟು ಏರಿಕೆಯಾಗಿ ಕ್ರಮವಾಗಿ ಪ್ರತಿ 10 ಗ್ರಾಂ ಚಿನ್ನಕ್ಕೆ 17,240 ಮತ್ತು 17,090 ರೂಪಾಯಿಗಳಿಗೆ ತಲುಪಿದೆ.

ಬೆಳ್ಳಿಯ ದರದಲ್ಲಿ ಕೂಡಾ, ಪ್ರತಿ ಕೆಜಿಗೆ 50 ರೂಪಾಯಿಗಳಷ್ಟು ಏರಿಕೆಯಾದಿ 28,050 ರೂಪಾಯಿಗಳಿಗೆ ತಲುಪಿದೆ.ಏತನ್ಮಧ್ಯೆ, ಬೆಳ್ಳಿಯ (100 ನಾಣ್ಯಗಳು) ದರದಲ್ಲಿ ಕೂಡಾ ಏರಿಕೆಯಾಗಿ 33,600 ರೂಪಾಯಿಗಳಿಗೆ ಏರಿಕೆಯಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ