ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಸಾಮ್‌ಸುಂಗ್‌ಗೆ 3.59 ಬಿನ್ ಡಾಲರ್‌ಗಳ ಆಧಾಯ (Samsung Electronics | Memory chips | First quarter | Net profit)
Bookmark and Share Feedback Print
 
ಎಲೆಕ್ಟ್ರಾನಿಕ್ ಉಪಕರಣಗಳ ತಯಾರಿಕೆ ಸಂಸ್ಥೆಯಾದ ಸಾಮ್‌ಸುಂಗ್, ಕಂಪ್ಯೂಟರ್ ಮೆಮೋರಿ ಚಿಪ್ಸ್ ದರ ಏರಿಕೆ ಹಾಗೂ ಬೇಡಿಕೆಯಲ್ಲಿ ಹೆಚ್ಚಳವಾದ ಹಿನ್ನೆಲೆಯಲ್ಲಿ 2010ರ ಮಾರ್ಚ್ 31ಕ್ಕೆ ಮೊದಲ ತ್ರೈಮಾಸಿಕ ಅಂತ್ಯಗೊಂಡಂತೆ 3.59 ಬಿಲಿಯನ್ ಡಾಲರ್‌ಗಳ ನಿವ್ವಳ ಲಾಭವಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಮೊದಲ ತ್ರೈಮಾಸಿಕ ಅವಧಿಯ ನಿವ್ವಳ ಮಾರಾಟ 34.64 ಟ್ರಿಲಿಯನ್ ಯೆನ್‌ಗಳಿಗೆ ತಲುಪಿದ್ದು, ಕಳೆದ ವರ್ಷದ ಮೊದಲ ತ್ರೈಮಾಸಿಕ ಅವಧಿಗೆ ಹೋಲಿಸಿದಲ್ಲಿ ಶೇ. 20.8ರಷ್ಟು ಏರಿಕೆಯಾಗಿದೆ.

ಸಾಮ್‌ಸುಂಗ್ ಕಂಪೆನಿ ಜಗತ್ತಿನ ಬೃಹತ್ ಕಂಪ್ಯೂಟರ್ ಮೆಮೋರಿ ಚಿಪ್ಸ್‌ ಫ್ಲ್ಯಾಟ್ ಸ್ಕ್ರೀನ್ ಟೆಲಿವಿಜನ್ ಮತ್ತು ಲಿಕ್ವಿಡ್ ಕ್ರಿಸ್ಟಲ್ ವಸ್ತುಗಳ ತಯಾರಿಕೆ ಸಂಸ್ಥೆಯಾಗಿದ್ದು, ಮೊಬೈಲ್ ಕ್ಷೇತ್ರದಲ್ಲಿ ಜಾಗತಿಕವಾಗಿ ಎರಡನೇ ಸ್ಥಾನವನ್ನು ಪಡೆದಿದೆ.

ಕಂಪ್ಯೂಟರ್ ಮೆಮೋರಿ ಚಿಪ್ಸ್‌ಗಳ ಬೇಡಿಕೆಯಲ್ಲಿ ಹೆಚ್ಚಳ ಹಾಗೂ ನಿಗದಿತ ಸರಬರಾಜಿನಿಂದಾಗಿ ದರದಲ್ಲಿ ಏರಿಕೆಯಾಗಿದೆ ಎಂದು ಸಾಮ್‌ಸುಂಗ್ ಕಂಪೆನಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಶೇರುಪೇಟೆಯ ಇಂದಿನ ಆರಂಭಿಕ ವಹಿವಾಟಿನ ಶೇರುದರಗಳಲ್ಲಿ ಶೇ.2.8ರಷ್ಟು ಏರಿಕೆಯಾಗಿ 841,000 ಯೆನ್‌ಗಳಿಗೆ ತಲುಪಿದ್ದರಿಂದ ಹೂಡಿಕೆದಾರರು ಸಂತಸಗೊಂಡಿದ್ದಾರೆ ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ