ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಫಾರೆಕ್ಸ್: ಡಾಲರ್ ಎದುರಿಗೆ ರೂಪಾಯಿ ಮೌಲ್ಯ ಹೆಚ್ಚಳ (Rupee | Currency| Capital inflow)
Bookmark and Share Feedback Print
 
ಮಾರುಕಟ್ಟೆಗಳಲ್ಲಿ ವಿದೇಶಿ ಬಂಡವಾಳದ ಒಳಹರಿವು ಹಾಗೂ ಏಷ್ಯಾ ಕರೆನ್ಸಿಗಳ ಎದುರು ಡಾಲರ್ ಮೌಲ್ಯ ಕುಸಿತದಿಂದಾಗಿ, ಡಾಲರ್ ಎದುರಿಗೆ ರೂಪಾಯಿ 7 ಪೈಸೆ ಚೇತರಿಸಿಕೊಂಡು 44.44 ರೂಪಾಯಿಗಳಿಗೆ ತಲುಪಿದೆ.

ವಿದೇಶಿ ವಿನಿಮಯ ಮಾರುಕಟ್ಟೆಯ ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ 13 ಪೈಸೆ ಏರಿಕೆ ಕಂಡು 44.51/52 ರೂಪಾಯಿಗಳಿಗೆ ತಲುಪಿ ಮುಕ್ತಾಯವಾಗಿತ್ತು. ಇಂದಿನ ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರಿಗೆ ರೂಪಾಯಿ 7 ಪೈಸೆ ಚೇತರಿಸಿಕೊಂಡು 44.44 ರೂಪಾಯಿಗಳಿಗೆ ತಲುಪಿದೆ.

ಮಾರುಕಟ್ಟೆಗಳಲ್ಲಿ ವಿದೇಶಿ ಬಂಡವಾಳದ ಒಳಹರಿವು ಹಾಗೂ ಏಷ್ಯಾ ಕರೆನ್ಸಿಗಳ ಎದುರು ಡಾಲರ್ ಮೌಲ್ಯ ಕುಸಿತದಿಂದಾಗಿ, ಡಾಲರ್ ಎದುರು ರೂಪಾಯಿ ಮೌಲ್ಯ ಹೆಚ್ಚಳವಾಗಲು ಕಾರಣವಾಗಿದೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.

ಏತನ್ಮಧ್ಯೆ, ಮುಂಬೈ ಶೇರುಪೇಟೆಯ ಸೂಚ್ಯಂಕ ಆರಂಭಿಕ ವಹಿವಾಟಿನಲ್ಲಿ 128.38 ಪಾಯಿಂಟ್‌ಗಳ ಏರಿಕೆ ಕಂಡು 17,631.85 ಅಂಕಗಳಿಗೆ ತಲುಪಿದೆ.
ಸಂಬಂಧಿತ ಮಾಹಿತಿ ಹುಡುಕಿ