ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಎಚ್‌ಸಿಎಲ್‌ ಇನ್ಫೋಸಿಸ್ಟಮ್ಸ್‌ಗೆ 60 ಕೋಟಿ ಲಾಭ (Quarterly profit|HCL Infosystems)
Bookmark and Share Feedback Print
 
ದೇಶದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಎಚ್‌ಸಿಎಲ್‌ ಇನ್ಫೋ ಸಿಸ್ಟಮ್ಸ್, 2010ರ ಮಾರ್ಚ್ 31ಕ್ಕೆ ತ್ರೈಮಾಸಿಕ ಅಂತ್ಯಗೊಂಡಂತೆ ನಿವ್ವಳ ಲಾಭದಲ್ಲಿ ಶೇ.3.44ರಷ್ಟು ಏರಿಕೆಯಾಗಿ 60 ಕೋಟಿ ರೂಪಾಯಿಗಳಿಗೆ ತಲುಪಿದೆ.

ಮಾರ್ಚ್ 31ಕ್ಕೆ ಮೂರನೇ ತ್ರೈಮಾಸಿಕ ಅಂತ್ಯಗೊಂಡಂತೆ ನಿವ್ವಳ ಮಾರಾಟದಲ್ಲಿ ಕುಸಿತವಾಗಿ 2,814.50 ಕೋಟಿ ರೂಪಾಯಿಗಳಿಗೆ ತಲುಪಿದೆ. ಕಳೆ ವರ್ಷದ ಅವಧಿಯಲ್ಲಿ 2,990.63 ಕೋಟಿ ರೂಪಾಯಿಗಳಿಗೆ ತಲುಪಿತ್ತು ಎಂದು ಎಚ್‌ಸಿಎಲ್ ಇನ್ಫೋಸಿಸ್ಟಮ್ಸ್, ‌ ಮುಂಬೈ ಶೇರುಪೇಟೆಗೆ ಸಲ್ಲಿಸಿದ ಮಾಹಿತಿಯಲ್ಲಿ ಬಹಿರಂಗಪಡಿಸಿದೆ.

ಎಚ್‌ಸಿಎಲ್ ಇನ್ಫೋಸಿಸ್ಟಮ್ಸ್ ಅಡಳಿತ ಮಂಡಳಿ, 2009-10ರ ಅವಧಿಯಲ್ಲಿ ಶೇರುದಾರರಿಗೆ 2ರೂಪಾಯಿ ಮುಖಬೆಲೆಯ ಶೇರಿಗೆ 2 ರೂಪಾಯಿ ಡೆವಿಡೆಂಡ್ ಘೋಷಿಸಿದೆ.

ಮಾರ್ಚ್ 31ಕ್ಕೆ ಒಂಬತ್ತು ತಿಂಗಳು ಅಂತ್ಯಗೊಂಡಂತೆ, ಕ್ರೂಢೀಕೃತ ನಿವ್ವಳ ಲಾಭ, ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಶೇ.2.44ರಷ್ಟು ಏರಿಕೆಯಾಗಿ 175 ಕೋಟಿ ರೂಪಾಯಿಗಳಿಗೆ ತಲುಪಿದೆ.

2010ರ ಮಾರ್ಚ್ 31ಕ್ಕೆ ವರ್ಷಾಂತ್ಯಗೊಂಡಂತೆ, ಕಂಪೆನಿಯ ನಿವ್ವಳ ಲಾಭ, ಕಳೆದ ವರ್ಷಕ್ಕೆ ಹೋಲಿಸಿದಲ್ಲಿ 136 ಕೋಟಿ ರೂಪಾಯಿಗಳಿಗೆ ತಲುಪಿದೆ ಎಂಮದು ಕಂಪೆನಿಯ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ