ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಸರಕಾರದಿಂದ ಚೀನಾದ ಟೆಲಿಕಾಂ ಉಪಕರಣ ನಿಷೇಧ (Huawei | ZTE | Import | Department of Telecom | Ban | Network equipment)
Bookmark and Share Feedback Print
 
ದೇಶದ ಮೊಬೈಲ್ ಆಪರೇಟರ್‌ಗಳು, ಹುವೈ ಮತ್ತು ಝಟಿಇ ಸೇರಿದಂತೆ ಚೀನಾದಲ್ಲಿ ತಯಾರಿಸಲ್ಪಟ್ಟ ಟೆಲಿಕಾಂ ವಸ್ತುಗಳನ್ನು ಅಮುದು ಮಾಡಿಕೊಳ್ಳದಂತೆ ಕೇಂದ್ರ ಸರಕಾರ ಕಟ್ಟು ನಿಟ್ಟಿನ ಎಚ್ಚರಿಕೆ ನೀಡಿದೆ.

ಕೇಂದ್ರದ ಟೆಲಿಕಾಂ ಇಲಾಖೆ, ನಿರಂತರವಾಗಿ ಮೊಬೈಲ್ ಅಪರೇಟರ್‌ಗಳಿಗೆ ಚೀನಾದ ಟೆಲಿಕಾಂ ವಸ್ತುಗಳನ್ನು ಖರೀದಿಸದಂತೆ ಸಲಹೆ ನೀಡುತ್ತಿದೆ. ಆದರೆ ಈ ಬಾರಿ ಚೀನಾದ ಟೆಲಿಕಾಂ ವಸ್ತುಗಳನ್ನು ನಿಷೇಧಿಸಿ ಅಧಿಕೃತ ಆದೇಶ ಹೊರಡಿಸಿದೆ.

ಚೀನಾದಿಂದ ಕೆಲ ಟೆಲಿಕಾಂ ಉಪಕರಣಗಳನ್ನು ಖರೀದಿಸಲು ಪ್ರಯತ್ನಿಸುತ್ತಿರುವ ಮೊಬೈಲ್ ಆಪರೇಟರ್‌ಗಳಿಗೆ ಆದೇಶ ರವಾನಿಸಿದ್ದು, ಕೆಲ ಉಪಕರಣಗಳಲ್ಲಿ ಸ್ಪೇವೇರ್‌ ಅಥವಾ ಮಲ್‌ವೇರ್‌ಗಳನ್ನು ಅಳವಡಿಸಲಾಗಿದ್ದು, ಇದರಿಂದ ದೇಶದಲ್ಲಿರುವ ಟೆಲಿಕಾಂ ನೆಟ್‌ವರ್ಕ್‌ಗಳನ್ನು ಚೀನಾದ ಗುಪ್ತಚರ ಸಂಸ್ಥೆಗಳು ಪಡೆಯಲು ಸಾಧ್ಯವಾಗುತ್ತದೆ ಎಂದು ಸರಕಾರ ಆತಂಕ ವ್ಯಕ್ತಪಡಿಸಿದೆ.

ಕೇಂದ್ರ ಸರಕಾರ ಈ ಮೊದಲು ಐಎಂಇಐ ಸಂಖ್ಯೆಯಿಲ್ಲದ ಚೀನಾದ ಮೊಬೈಲ್ ಹ್ಯಾಂಡ್‌ಸೆಟ್‌ಗಳನ್ನು ನಿಷೇಧಿಸಿತ್ತು. ಭಾರತದ ಬೃಹತ್ ಮಾರುಕಟ್ಟೆಯನ್ನು ಪ್ರವೇಶಿಸಲು ಯತ್ನಿಸುತ್ತಿರುವ ಝಟಿಇ ಮತ್ತು ಹುವೈ ಟೆಲಿಕಾಂ ಕಂಪೆನಿಗಳು ನಿಷೇಧದಿಂದ ಆಘಾತಗೊಂಡಿವೆ. ಕಳೆದ ಆರ್ಥಿಕ ವರ್ಷದ ಅವಧಿಯಲ್ಲಿ ಝಟಿಇ ಟೆಲಿಕಾಂ ಕಂಪೆನಿ ಮಾರಾಟದಲ್ಲಿ ಶೇ.50ರಷ್ಟು ಗುರಿಯನ್ನು ಸಾಧಿಸಿತ್ತು.

ಚೀನಾದ ಉಪಕರಣ ತಯಾರಕರಿಂದಾಗಿ ದೇಶಿಯ ಮಾರುಕಟ್ಟೆಯಲ್ಲಿ ನಷ್ಟ ಅನುಭವಿಸುತ್ತಿದ್ದ ಯುರೋಪಿಯನ್ ಹಾಗೂ ಅಮೆರಿಕನ್ ಮಾರುಕಟ್ಟೆಗಳಿಗೆ ಭಾರಿ ಲಾಭವಾಗುವ ಸಾಧ್ಯತೆಗಳಿವೆ.
ಸಂಬಂಧಿತ ಮಾಹಿತಿ ಹುಡುಕಿ